ದೆಹಲಿಯ ವಾಯುಗುಣಮಟ್ಟ ಮತ್ತೆ ಕುಸಿತ

Ad Code

ದೆಹಲಿಯ ವಾಯುಗುಣಮಟ್ಟ ಮತ್ತೆ ಕುಸಿತ

 





ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆರು ವರ್ಷದ ನಂತರ ಮತ್ತೆ ವಾಯು ಗುಣಮಟ್ಟ ಸೂಚ್ಯಾಂಕವು  ಕುಸಿತ ಕಂಡಿದೆ. ಈ ಬಾರಿಯ ವಾಯುಗುಣಮಟ್ಟ ಅತ್ಯಂತ ಕೆಟ್ಟ ದಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಈ ವರ್ಷದ ನವೆಂಬರ್ ನಲ್ಲಿ ಸರಾಸರಿ 377ರಷ್ಟಿತ್ತು. ನಂತರ 11ದಿನಗಳವರೆಗೆ ದೆಹಲಿಯ ವಾಯುಗುಣಮಟ್ಟ ಕೆಟ್ಟ ವಿಭಾಗದಲ್ಲಿಯೇ ಇದೆ ಎಂದು ವರದಿ ಮಾಡಿದೆ.  ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಮತ್ತು ಪದೇ ಪದೇ ಹವಾಮಾನ ಬದಲಾಗುತ್ತಿರುವುದರಿಂದ ಈ ರೀತಿಯ ಅಸಮತೋಲನವನ್ನು ನಾವು ನಿರೀಕ್ಷಿಸಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದರ ಬಗ್ಗೆ ಜಾಗರೂಕರಾಗುವ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯು ನಮ್ಮ ಮೇಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ

Post a Comment

0 Comments