ಮುಂದಿನ ಎಪ್ರಿಲ್ ನಿಂದ ವಾರಕ್ಕೆ ನಾಲ್ಕು ದಿನ ಕೆಲಸ

Ad Code

ಮುಂದಿನ ಎಪ್ರಿಲ್ ನಿಂದ ವಾರಕ್ಕೆ ನಾಲ್ಕು ದಿನ ಕೆಲಸ

ನವದೆಹಲಿ: ಕೇಂದ್ರ ಸರ್ಕಾರದ ಚಿಂತನೆ ಸಫಲತೆ ಕಂಡರೆ ಮುಂದಿನ ಎಪ್ರಿಲ್ ತಿಂಗಳಿಂದ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ‌. 

ಸಾಮಾಜಿಕ ಭದ್ರತೆ,  ಕೈಗಾರಿಕಾ ಸಂಬಂಧ, ಔದ್ಯೋಗಿಕ  ಸುರಕ್ಷತೆ ಮತ್ತು ಆರೋಗ್ಯದ  ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ   ಸಂಹಿತೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಈ ನಿಯಮದಡಿಯಲ್ಲಿ ಮೂರು ದಿನ ರಜೆ ಇದ್ದರೂ ನಾಲ್ಕು ದಿನ 12 ಗಂಟೆ ದುಡಿಯಬೇಕಾಗುತ್ತದೆ.  ಹೊಸ ಕಾರ್ಮಿಕ ಸಂಹಿತೆಗಳು ಮುಂದಿನ ವಿತ್ತೀಯ ವರ್ಷದಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

"2022-23 ರ ಹಣಕಾಸು ವರ್ಷದಲ್ಲಿ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ರಾಜ್ಯಗಳು ಇವುಗಳ ಕರಡು ನಿಯಮವನ್ನು ಪೂರ್ಣಗೊಳಿಸಿವೆ. ಆದರೆ ಸರ್ಕಾರವು ಕಾರ್ಮಿಕರಿಗೆಲ್ಲರಿಗೂ  ಏಕಕಾಲದಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಕೇಂದ್ರ ಬಯಸುತ್ತಿದೆ." ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾಧವ್ ಸರ್ಕಾರಕ್ಕೆ ನೀಡಿದ ಹೇಳಿಕೆಯಲ್ಲಿ " ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ 20 ರಾಜ್ಯಗಳು ನಿಯಮದ ಪ್ರಕಾರ ವೇತನ ಸಂಹಿತೆಗಳನ್ನು ಮೊದಲೇ ಅನುಸರಿಸುತ್ತಿದೆ " ಎಂದು ಹೇಳಿದ್ದಾರೆ. 

ಹೊಸ ಯೋಜನೆಯ ಪ್ರಕಾರ ಅನೇಕ ಬದಲಾವಣೆಗಳಾಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ  ಕೈಗೆ ಬರುವ ವೇತನ ಕಡಿಮೆಯಾಗಲಿದ್ದು ಭವಿಷ್ಯ ನಿಧಿ (ಪಿಎಫ್) ಹೆಚ್ಚಾಗಲಿದೆ. ಒಟ್ಟಾರೆಯಾಗಿ ಕೆಲಸದ ಅವಧಿ, ಕೆಲಸದ ದಿನ, ವೇತನದಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Post a Comment

0 Comments