ಭಾರತ ವಿರೋಧಿ ಪ್ರಚಾರದ 20 ಯೂಟ್ಯೂಬ್ ಚಾನೆಲ್‌ಗಳು, 2 ವೆಬ್‌ಸೈಟ್‌ಗಳಿಗೆ ಸರಕಾರ ನಿರ್ಬಂಧ

Ad Code

ಭಾರತ ವಿರೋಧಿ ಪ್ರಚಾರದ 20 ಯೂಟ್ಯೂಬ್ ಚಾನೆಲ್‌ಗಳು, 2 ವೆಬ್‌ಸೈಟ್‌ಗಳಿಗೆ ಸರಕಾರ ನಿರ್ಬಂಧ

ಪಾಕಿಸ್ತಾನದಿಂದ ಸಂಘಟಿತವಾದ ಅಪಪ್ರಚಾರವನ್ನು ಕಿತ್ತೊಗೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯೂಟ್ಯೂಬ್ ಚಾನೆಲ್‌ಗಳು ಧಾರ್ಮಿಕ ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ.


ಚಿತ್ರ ಕೃಪೆ: ನ್ಯೂಸ್ ಆನ್ ಎಐಆರ್


ಹೊಸದಿಲ್ಲಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಅಂತರ್ಜಾಲದಲ್ಲಿ ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಮಂಗಳವಾರ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ. ಚಾನಲ್‌ಗಳು ಪೋಸ್ಟ್ ಮಾಡಿದ ಹೆಚ್ಚಿನ ವಿಷಯಗಳೂ "ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದೆ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ" ಎಂದು ಸರ್ಕಾರ ಹೇಳಿದೆ.


ಗುಪ್ತಚರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ಸಚಿವಾಲಯವು ತೆಗೆದುಕೊಂಡಿದೆ.


ಈಗ ನಿರ್ಬಂಧಿಸಲಾದ ಚಾನಲ್‌ಗಳು ಮತ್ತು ವೆಬ್‌ಸೈಟ್‌ಗಳು ಪಾಕಿಸ್ತಾನದ ಸಂಘಟಿತ ಅಪಪ್ರಚಾರದ ಜಾಲಕ್ಕೆ ಸೇರಿದವುಗಳಾಗಿವೆ. ಕಾಶ್ಮೀರ, ಭಾರತೀಯ ಸೇನೆ, ರಾಮಮಂದಿರ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸಿಡಿಎಸ್‌ ಜನರಲ್ ಬಿಪಿನ್ ರಾವತ್, ಭಾರತಕ್ಕೆ ಸಂಬಂಧಿಸಿದ ಇತರ ವಿವಿಧ ಸೂಕ್ಷ್ಮ ವಿಷಯಗಳ ಕುರಿತು ವಿಭಜನಕಾರಿ ವಿಷಯಗಳನ್ನು ಪೋಸ್ಟ್ ಮಾಡುತ್ತಿವೆ ಎಂದು ಸಚಿವಾಲಯ ಹೇಳಿದೆ.



ಪಾಕಿಸ್ತಾನ ಮೂಲದ ದಿ ನಯಾ ಪಾಕಿಸ್ತಾನ್ ಗ್ರೂಪ್ (NPG)ನ ಯೂಟ್ಯೂಬ್ ಚಾನೆಲ್‌ಗಳ ನೆಟ್‌ವರ್ಕ್ ಮತ್ತು 35 ಲಕ್ಷಕ್ಕೂ ಹೆಚ್ಚು ಚಂದಾದಾರರ ಬೇಸ್ ಹೊಂದಿರುವ ಇತರ ಕೆಲವು ಸ್ವತಂತ್ರ ಚಾನೆಲ್‌ಗಳು ತಪ್ಪು ಮಾಹಿತಿಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ನಯಾ ಪಾಕಿಸ್ತಾನ್ ಗ್ರೂಪ್‌ನ ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು "ಪಾಕಿಸ್ತಾನಿ ಸುದ್ದಿ ವಾಹಿನಿಗಳ ನಿರೂಪಕರು" ನಿರ್ವಹಿಸುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.


ಯೂಟ್ಯೂಬ್ ಚಾನೆಲ್‌ಗಳು ರೈತರ ಪ್ರತಿಭಟನೆಗಳು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


"ಈ ಯೂಟ್ಯೂಬ್ ಚಾನೆಲ್‌ಗಳನ್ನು ಐದು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ದುರುದ್ದೇಶದಿಂದ ಸುಳ್ಳು- ಅಪಪ್ರಚಾರದ ವಿಷಯಗಳನ್ನು ಪೋಸ್ಟ್ ಮಾಡಲು ಬಳಸಲಾಗುತ್ತಿದೆ" ಎಂದು ಸಚಿವಾಲಯವು ಹೇಳಿದೆ.


ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಚಲಾಯಿಸುವ ಸಚಿವಾಲಯವು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಪೋರ್ಟಲ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಗೆ ವಿನಂತಿಸಿದೆ.



ಸರ್ಕಾರವು ನಿರ್ಬಂಧಿಸಿದ ಯೂಟ್ಯೂಬ್ ಚಾನೆಲ್‌ಗಳು:

ದಿ ಪಂಚ್ ಲೈನ್, ಇಂಟರ್‌ನ್ಯಾಶನಲ್ ವೆಬ್ ನ್ಯೂಸ್, ಖಾಲ್ಸಾ ಟಿವಿ, ದಿ ನೇಕೆಡ್ ಟ್ರೂತ್, 48 ನ್ಯೂಸ್, ಫಿಕ್ಷನಲ್, ಹಿಸ್ಟೋರಿಕಲ್ ಫ್ಯಾಕ್ಟ್ಸ್‌, ಪಂಜಾಬ್ ವೈರಲ್, ನಯಾ ಪಾಕಿಸ್ತಾನ್ ಗ್ಲೋಬಲ್, ಕವರ್ ಸ್ಟೋರಿ, ಗೋ ಗ್ಲೋಬಲ್, ಇಕಾಮರ್ಸ್, ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಜುನೈದ್ ಹಲೀಮ್ ಅಧಿಕಾರಿ, ತಯ್ಯಬ್ ಹನೀಫ್, ಝೈನ್ ಅಲಿ ಅಫೀಶಿಯಲ್, ಮೊಹ್ಸಿನ್ ರಜಪೂತ್, ಅಫೀಶಿಯಲ್, ಕನೀಜ್ ಫಾತಿಮಾ, ಸದಾಫ್ ದುರಾನಿ, ಮಿಯಾನ್ ಇಮ್ರಾನ್, ಅಹ್ಮದ್, ನಜಮ್ ಉಲ್ ಹಸನ್, ಬಜ್ವಾ ಮತ್ತು ನ್ಯೂಸ್24.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments