ಭಾರತದ ಮೊದಲ ಮಹಿಳಾ ಮನೋವೈದ್ಯೆ, ಮಂಗಳೂರು ಮೂಲದ ಶಾರದಾ ಮೆನನ್‌ ಇನ್ನಿಲ್ಲ

Ad Code

ಭಾರತದ ಮೊದಲ ಮಹಿಳಾ ಮನೋವೈದ್ಯೆ, ಮಂಗಳೂರು ಮೂಲದ ಶಾರದಾ ಮೆನನ್‌ ಇನ್ನಿಲ್ಲ


ಚೆನ್ನೈ: ದೇಶದ ಮೊದಲ ಮಹಿಳಾ ಮನೋವೈದ್ಯೆ ಎಂಬ ಬಿರುದನ್ನು ಹೊಂದಿದ್ದ ಶಾರದಾ ಮೆನನ್ ನಿನ್ನೆ  ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ವಿಶೇಷವೆಂದರೆ ಇವರು ಹುಟ್ಟಿದ್ದು ಮಂಗಳೂರಿನಲ್ಲಿ. ಅದು ನಮ್ಮ ಕರಾವಳಿಗೆ ಅತೀ ದೊಡ್ಡ ಕೀರ್ತಿ ತರುವ ವಿಷಯವೂ ಹೌದು. ಏಕೆಂದರೆ ಭಾರತದ ಮೊದಲ ಮನೋವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇವರು ಮಾನಸಿಕ ಆರೋಗ್ಯ ಸಂಸ್ಥೆಗೆ ದೀರ್ಘಕಾಲದವರೆಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 

ಚೆನ್ನೈನಲ್ಲಿ ವ್ಯಾಸಂಗ ಮಾಡಿದ ಇವರು ಮದ್ರಾಸ್ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿದ್ದರು. ಅಸಾಧಾರಣ ಉತ್ಸಾಹವನ್ನು ಹೊಂದಿದ್ದ ಇವರು ಸರಳ ನಡವಳಿಕೆಯ ವ್ಯಕ್ತಿಯಾಗಿದ್ದರು. ಮಹಿಳೆಯಾಗಿ ಇವರು ಸಲ್ಲಿಸಿದ ಸೇವೆಗೆ 1992ರಲ್ಲಿ ಇವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ರೋಗಿಗಳ ಯೋಗಕ್ಷೇಮಕ್ಕೆ ಮೊದಲ ಪ್ರಾಧಾನ್ಯತೆ ನೀಡುತ್ತಿದ್ದ ಶಾರದಾರವರು ರೋಗಿಯ ಜೊತೆ ಅಲ್ಪ ಕಾಲ ಮಾತಾಡಿದರೆ ಸಾಕು. ಅವರ ಸಮಸ್ಯೆ ಏನೆಂದು ತಿಳಿಯುತ್ತಿದ್ದರು.

ಪ್ರಸ್ತುತ ಜಗತ್ತಿನ ಜಂಜಾಟದಲ್ಲಿ ಸಿಲುಕಿ ಮಾನಸಿಕ ಖಿನ್ನತೆಗೆ ಒಳಗಾಗುವ ಅದೆಷ್ಟೋ ಜನಕ್ಕೆ ಇವರಂತಹ ವೈದ್ಯೆಯ ಅವಶ್ಯಕತೆ ಇತ್ತು. ಆದರೆ ಅವರು ನಿನ್ನೆ ನಮ್ಮನಗಲಿರುವುದು ದೊಡ್ಡ ನಷ್ಟ ಹಾಗೂ ಬೇಸರದ ಸಂಗತಿಯಾಗಿದೆ.

Post a Comment

0 Comments