ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ನ ಉಗ್ರನನ್ನು ಕೊಲ್ಲಲಾಗಿದೆ.
ಈತ ಕುಲ್ಗಾಂವ್ ನ ಸೆಹೋಪೊರಾ ಎಂಬಲ್ಲಿಯ ನಿವಾಸಿಯಾಗಿದ್ದಾನೆ. ಪೋಲೀಸ್ ದಾಖಲೆಗಳಲ್ಲಿ ಕೂಡ ಆತ ಉಗ್ರ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದ.ಜಿಲ್ಲೆಯ ಅರ್ವಾನಿಯಲ್ಲಿ ಮುಮಾನ್ಹಾಲ್ ಗ್ರಾಮದಲ್ಲಿ ಆತ ಅಡಗಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಗುಂಡಿನ ಚಕಮಕಿಯಲ್ಲಿ ಆತ ಅಸುನೀಗಿದ್ದಾನೆ. ಪೋಲೀಸ್ ಇನ್ಸ್ಪೆಕ್ಟರ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಯ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.
0 Comments