ಅಂತರಾಷ್ಟ್ರೀಯ ವಾಯುಸೇವೆ ಪುನರಾರಂಭ ಸದ್ಯಕ್ಕಿಲ್ಲ

Ad Code

ಅಂತರಾಷ್ಟ್ರೀಯ ವಾಯುಸೇವೆ ಪುನರಾರಂಭ ಸದ್ಯಕ್ಕಿಲ್ಲ


ಕೊರೋನಾ ಹೊಸ ರೂಪಾಂತರಿ ಓಮಿಕ್ರಾನ್ ಭೀತಿ ಇಂದು ಎಲ್ಲರನ್ನು ಕಾಡುತ್ತಿದೆ. ಇದರ ಹಿನ್ನೆಲೆ ಕೇಂದ್ರಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು ಅಂತರಾಷ್ಟ್ರೀಯ ವಿಮಾನಸೇವೆಯನ್ನು ಪುನರಾರಂಭಿಸದಿರಲು ಸೂಚಿಸಿದೆ. ಈ ತಿಂಗಳ 15ರಿಂದ ಭಾರತದಿಂದ ಹೊರಹೋಗುವ ಹಾಗೂ ಭಾರತಕ್ಕೆ ಆಗಮಿಸುವ ವಿಮಾನಗಳ ಸೇವೆಯನ್ನು ಪುನರಾರಂಭ ಮಾಡಲು ನಿರ್ಧರಿಸಿತ್ತು. ಆದರೆ ಹೊಸ ರೂಪಾಂತರಿ ಓಮಿಕ್ರಾನ್ ನಿಂದಾಗಿ ಈ ಚಿಂತನೆ ಕೈಬಿಡಲಾಗಿದ್ದು ಮತ್ತೆ ಮರು ಆರಂಭಿಸುವ ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಡಿಜಿಸಿಎ ಪ್ರಕಟಿಸಿದೆ.

Post a Comment

0 Comments