ಜೈಪುರ: ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಈಗ ತಮ್ಮ ಹೇಳಿಕೆಯೊಂದರ ಮೂಲಕ ವಿವಾದ ಸೃಷ್ಠಿಸಿದ್ದಾರೆ.
ಭಾನುವಾರ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು "ನೀವು ಯಾವುದಾದರೂ ಸಭೆ ಸಮಾರಂಭಗಳಿಗೆ ಹೊರಟಿದ್ದರೆ, ಪತ್ರಕರ್ತರು, ಮಾಧ್ಯಮ ಸಿಬ್ಬಂದಿಗಳಿಗೆ ತಿಳಿಸಿ. ಅವರೂ ನಿಮ್ಮೊಂದಿಗೆ ಬರುತ್ತಾರೆ. ಯಾಕೆಂದರೆ ಅವರಿಗೆ ಡೋಸ್ ಬೇಕಾಗಿರುತ್ತದೆ " ಎಂದು ಅವರು "ಹಣ" ವನ್ನು ಸಾಂಕೇತಿಸಲು ಡೋಸ್ ಪದ ಬಳಕೆ ಮಾಡಿ ಮಾಧ್ಯಮವನ್ನು ವ್ಯಂಗ್ಯವಾಡಿದ್ದಾರೆ.
"ಮುಂದಿನ ವರ್ಷಗಳಲ್ಲಿ ಬರುವ ವಿಧಾನಸಭೆ ಚುನಾವಣೆಗಳು, ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಪರವಾಗಿಯೇ ಸುದ್ದಿಗಳು ಬರುತ್ತವೆ. ನಾವೂ ಗೆಲ್ಲಬಹುದು" ಎಂದು ದೋಟಾಸ್ರಾ ತಿಳಿಸಿದ್ದಾರೆ.
ಇವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು ಅನೇಕ ವಿರೋಧಗಳು ವ್ಯಕ್ತವಾಗುತ್ತಿವೆ.
0 Comments