ಗೋವಾ: ಕನ್ನಡದ ಹುಡುಗರಿಬ್ಬರು ನಿರ್ಮಿಸಿದ ಚಿತ್ರಗಳಿಗೆ ಇಂಟೆಕ್ ಫಿಲ್ಮ್‌ ಇಟ್ ಇಂಡಿಯಾ ಪ್ರಶಸ್ತಿ

Ad Code

ಗೋವಾ: ಕನ್ನಡದ ಹುಡುಗರಿಬ್ಬರು ನಿರ್ಮಿಸಿದ ಚಿತ್ರಗಳಿಗೆ ಇಂಟೆಕ್ ಫಿಲ್ಮ್‌ ಇಟ್ ಇಂಡಿಯಾ ಪ್ರಶಸ್ತಿ


ಪಣಜಿ: ಇಂಟೆಕ್ ಫಿಲ್ಮಿಟ್ ಇಂಡಿಯಾ ಪ್ರೊಜೆಕ್ಟ್‌ನಲ್ಲಿ ಗೋವಾ ಪಣಜಿಯ ಪೀಪಲ್ಸ್‌ ಸ್ಕೂಲ್‍ನಲ್ಲಿ 9ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಶ್ರೀಕೃಷ್ಣ ಗಣಪತಿ ಭಟ್ ನಿರ್ಮಿಸಿದ "ಪೋರ್ಟ್‌ ಆಗುಂದಾ" ಶೀರ್ಷಿಕೆಯ ಚಲನಚಿತ್ರವು ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದುಕೊಂಡಿದೆ.


ವಿದ್ಯಾರ್ಥಿ ಶ್ರೀಕೃಷ್ಣ ಭಟ್ ಈತನ ತಂದೆ ಗಣಪತಿ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಗಣಪತಿ ಭಟ್ ರವರು ಪಣಜಿ ಸಮೀಪದ ರಾಯಬಂದರ್‌ನ ಶ್ರೀರಾಮ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಕೃಷ್ಣ ಭಟ್ ಈತನು ಗಣಪತಿ ಭಟ್ ಮತ್ತು ಪಾರ್ವತಿ ಭಟ್ ಇವರ ಮಗನಾಗಿದ್ದಾನೆ.


ಅಂತೆಯೇ ಗೋವಾ ಮೂಲದ ಪೀಪಲ್ಸ್‌ ಸ್ಕೂಲ್‍ನಲ್ಲಿ 9ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನ್ ರಾಜ್ ನಿರ್ಮಿಸಿರುವ "ಕಿಚನ್ ಗಾರ್ಡನ್ ಇನ್ ಅರ್ಬನ್ ಇಂಡಿಯಾ" ಚಲನಚಿತ್ರ ಉತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ. ಕರ್ನಾಟಕ ಮೂಲದ ಹಾಗೂ ಗೋವಾದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಕೃಷ್ಣ ಭಟ್ ಈತನ ಸಾಧನೆಗೆ ಗೋವಾದ ವಿವಿಧ ಕನ್ನಡ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments