ಕಾಶ್ಮೀರಿ ಪಂಡಿತರ ಹತ್ಯಾಕಾಂಡ: ಮೊದಲ ಬಾರಿಗೆ ಗುರುತಿಸಿದ ಅಮೆರಿಕದ ರೋಡ್ ಐಲ್ಯಾಂಡ್ ಸರಕಾರ

Ad Code

ಕಾಶ್ಮೀರಿ ಪಂಡಿತರ ಹತ್ಯಾಕಾಂಡ: ಮೊದಲ ಬಾರಿಗೆ ಗುರುತಿಸಿದ ಅಮೆರಿಕದ ರೋಡ್ ಐಲ್ಯಾಂಡ್ ಸರಕಾರ


ವಿವೇಕ್ ರಂಜನ್‌ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಸುದ್ದಿ ಮಾಡುತ್ತಲೇ ಇದೆ. ಮಾರ್ಚ್ 11 ರಂದು ಚಿತ್ರ ಥಿಯೇಟರ್‌ಗೆ ಬಂದಾಗಿನಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾಶ್ಮೀರಿ ಪಂಡಿತರ ಸಂಕಷ್ಟವನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಪ್ರಜಾಸತ್ತಾತ್ಮಕ ಮತ್ತು ಉದಾರವಾದಿ ರಾಜ್ಯ - ರೋಡ್ ಐಲ್ಯಾಂಡ್ ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಅಧಿಕೃತವಾಗಿ ಗುರುತಿಸಿದೆ. ಇದನ್ನು ಚಿತ್ರ ನಿರ್ದೇಶಕ ವಿವೇಕ್  ಐತಿಹಾಸಿಕ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ. ಇದು ಹೊಸ ಭಾರತದ ಶಕ್ತಿ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.


ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ವಿವೇಕ್ ಅವರು ಐತಿಹಾಸಿಕವಾಗಿ ಬರೆದಿದ್ದಾರೆ ... 32 ವರ್ಷಗಳಲ್ಲಿ ಮೊದಲ ಬಾರಿಗೆ, ಪ್ರಪಂಚದ ಯಾವುದೇ ರಾಜ್ಯದಿಂದ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ - ರೋಡ್ ಐಲ್ಯಾಂಡ್ ಎಂಬ ಪ್ರಜಾಸತ್ತಾತ್ಮಕ ಮತ್ತು ಉದಾರವಾದಿ ರಾಜ್ಯವು ಕಾಶ್ಮೀರದಲ್ಲಿ ನಡೆದ ನರಮೇಧವನ್ನು ಅಧಿಕೃತವಾಗಿ ಗುರುತಿಸಿದೆ. ಇದಕ್ಕೆ ದಿ ಕಾಶ್ಮೀರಿ ಫೈಲ್ಸ್‌ ಚಿತ್ರವೇ ಪ್ರೇರಣೆಯಾಗಿದೆ ಎಂಬುದನ್ನೂ ರೋಡ್ ಐಲ್ಯಾಂಡ್ ಸರಕಾರ ಪ್ರಕಟಿಸಿದೆ.

 


(ಟ್ವೀಟ್‌ನ ಕನ್ನಡ ಅವತರಣಿಕೆ:

ಐತಿಹಾಸಿಕ: ಜಗತ್ತಿನಲ್ಲೇ ಮೊದಲ ಬಾರಿಗೆ, 32 ವರ್ಷಗಳ ಬಳಿಕ ಅಮೆರಿಕದ ಅತಿಹೆಚ್ಚು ಪ್ರಜಾಸತ್ತಾತ್ಮಕ ಮತ್ತು ಉದಾರವಾದಿ ರಾಜ್ಯವೆಂದೇ ಹೆಸರಾದ ರೋಢೆ ಐಲ್ಯಾಂಡ್ ಕಾಶ್ಮೀರದಲ್ಲಿ ನಡೆದ ಹಿಂದುಗಳ ಹತ್ಯಾಕಾಂಡವನ್ನು ಅಧಿಕೃತವಾಗಿ ಗುರುತಿಸಿದೆ. ಅದೂ ಸಹ ದಿ ಕಾಶ್ಮೀರ್‌ ಫೈಲ್ಸ್‌ ಎಂಬ ಸಿನಿಮಾ ಬಂದ ಬಳಿಕ. ಇಲ್ಲಿದೆ ನೋಡಿ ಅಲ್ಲಿನ ಸರಕಾರ ಹೊರಡಿಸಿದ ಅಧಿಕೃತ ಘೋಷಣಾ ಪತ್ರ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಅದು ಘೋಷಿಸಿದೆ. ನವ ಭಾರತದ ಪ್ರಭಾವೀ ನಾಯಕತ್ವದ ಪರಿಣಾಮಕಾರಿ ವಿದೇಶಾಂಗ ನೀತಿಗಳ ಫಲಶ್ರುತಿ ಇದು.)


'ದಿ ಕಾಶ್ಮೀರ್ ಫೈಲ್ಸ್' ನಿರ್ಮಾಪಕ ಅಭಿಷೇಕ್ ಅಗರವಾಲ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಚಿತ್ರವನ್ನು ಪ್ರಧಾನಿ ಕೂಡ ಶ್ಲಾಘಿಸಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ನಿರ್ವಹಣೆ ತೋರಿದೆ.. ಇದುವರೆಗಿನ ವೆಚ್ಚಕ್ಕಿಂತ (14 ಕೋಟಿ) ಹೆಚ್ಚು ಗಳಿಸಿದೆ.


ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ ಅವರಂತಹ ಅನೇಕ ತಾರೆಯರು 'ದಿ ಕಾಶ್ಮೀರ್ ಫೈಲ್ಸ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯವನ್ನು ತೋರಿಸುವುದರ ಜೊತೆಗೆ ಆರ್ಟಿಕಲ್ 370 ರಿಂದ ಕಾಶ್ಮೀರದ ಇತಿಹಾಸದವರೆಗೆ ಪ್ರಸ್ತಾಪಿಸಲಾಗಿದೆ.

hit counter

Post a Comment

0 Comments