ಪಣಜಿ: ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಆಧಾರ್‌ ನೋಂದಣಿ ಕೇಂದ್ರ ಆರಂಭ

Ad Code

ಪಣಜಿ: ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಆಧಾರ್‌ ನೋಂದಣಿ ಕೇಂದ್ರ ಆರಂಭ


ಪಣಜಿ: ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಗೋವಾದ ಎಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ಆಧಾರ್ ನೋಂದಣಿ ಕೇಂದ್ರ ಸ್ಥಾಪನೆಯಾಗಿರುವುದು ಸಂತೋಷಕರ ವಿಷಯವಾಗಿದೆ ಎಂದು ಬಿಎಸ್‍ಎನ್‍ಎಲ್ ಗೋವಾ ಪ್ರಧಾನ ವ್ಯವಸ್ಥಾಪಕರಾದ ಸಂಜಯಕುಮಾರ್ ಚೌಧರಿ ಅಭಿಪ್ರಾಯಪಟ್ಟರು.


ಗೋವಾ ರಾಜಧಾನಿ ಪಣಜಿಯ 18 ಜೂನ್ ರೋಡ್‍ನಲ್ಲಿರುವ ಭಾರತ್ ಸಂಚಾರ ನಿಗಮ್ ಲಿ. ಕಛೇರಿಯಲ್ಲಿ ಆರಂಭಿಸಲಾಗಿರುವ ಆಧಾರ ನೋಂದಣಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.


ಈ ಆಧಾರ್‌ ನೋಂದಣಿ ಕೇಂದ್ರದಲ್ಲಿ ಹೊಸ ಆಧಾರ್‌ ಕಾರ್ಡ್‌ ಪಡೆದುಕೊಳ್ಳುವುದು, ಪೊಟೊ-ವಿಳಾಸ-ಮೊಬೈಲ್‍ ಸಂಖ್ಯೆ ಬದಲಾವಣೆ ಹೀಗೆ ಆಧಾರ್‌ನ ಎಲ್ಲ ಸೇವೆಗಳು ಲಭ್ಯವಾಗಲಿದೆ ಎಂದು ಸಂಜಯಕುಮಾರ್ ಚೌಧರಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಆಧಾರ ನೋಂದಣಿ ಕೇಂದ್ರದ ಪ್ರಮುಖರಾದ ಉದಯ್ ಭಟ್, ಸೇರಿದಂತೆ ಭಾರತ್ ಸಂಚಾರ ನಿಗಮ್ ಲಿಮಿಟೆಡ್‍ನ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments