ಚಿತ್ರ ಕೃಪೆ: ಎಎನ್‌ಐ
ಹೊಸದಿಲ್ಲಿ: ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧವನ್ನು ಘೋಷಣೆ ಮೋಡಿದೆ. ಈ ಮಧ್ಯೆ ಭಾರತದ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಅವರು ಈ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ಇಗೊರ್ ಪೊಲಿಖಾ, ''ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನವದೆಹಲಿ ಹೆಚ್ಚಿನ ಸಕ್ರಿಯವಾದ ಪಾತ್ರವನ್ನು ವಹಿಸುತ್ತದೆ'' ಎಂದು ಹೇಳಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕ ಮಾಡುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯ ಮಾಡುತ್ತೇವೆ ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ.
''ಎಷ್ಟು ಜನ ವಿಶ್ವ ನಾಯಕರ ಮಾತನ್ನು ಪುಟಿನ್ ಕೇಳುತ್ತಾರೆ ಎಂಬುದು ನನಗೆ ತಿಳಿದಿಲ್ಲ, ಆದರೆ, ಮೋದಿಯವರ ಬಗ್ಗೆ ನನಗೆ ಭರವಸೆ ಇದೆ. ಅವರ ಬಲವಾದ ಧ್ವನಿಯಿಂದಾಗಿ, ಕನಿಷ್ಠಪಕ್ಷ ಪುಟಿನ್ ಯೋಚಿನೆ ಮಾಡುವಂತೆ ಮಾಡುತ್ತಾರೆ. ನಾವು ಭಾರತದ ಸರಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ'' ಎಂದಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಲು ಪ್ರಧಾನಿ ಮುಂದಾಗುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಸದ್ಯ ಅಲ್ಲಿರುವ ಭಾರತೀಯರ ರಕ್ಷಣೆ ವಿಚಾರದಲ್ಲಿ ಭಾರತ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments