ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಭಾವ ಬೀರಲು ವಿಫಲರಾದ ಹಿನ್ನೆಲೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ರವರನ್ನು ಟಿಎಂಸಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ.
ಬಂಗಾಳದಲ್ಲಿ ಮುನ್ಸಿಪಲ್ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ರವರು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ವಜಾಗೊಳಿಸಿದ್ದು, 20 ಸದಸ್ಯರ ಪರ್ಯಾಯ ಕೋರ್ ಕಮೀಟಿಯನ್ನು ನೇಮಿಸುವುದಾಗಿ ಘೋಷಿಸಿದ್ದಾರೆ. ಈ ಸಮೀತಿಗೆ ಎಂಟು ಸದಸ್ಯರನ್ನು ನೇಮಿಸಲಾಗಿದೆ, ಆದರೆ ಫಾಲೆರೊ ರವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಗೋವಾ ಪ್ರವೇಶಿಸಿದ ನಂತರ ಟಿಎಂಸಿ ಬಹು ನಿರೀಕ್ಷೆಯೊಂದಿಗೆ ಪಕ್ಷದ ಅಧಿಕಾರವನ್ನು ಲುಯಿಜಿನ್ ಫಾಲೆರೊಗೆ ಹಸ್ತಾಂತರಿಸಿತ್ತು. ಆದರೆ ಫಾಲೆರೊ ರವರು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಿಲ್ಲ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments