ನಕಲಿ ಲಿಂಕ್‌ಗಳನ್ನು ನಂಬಿ ಮೋಸ ಹೋಗಬೇಡಿ: ಅಂಚೆ ಇಲಾಖೆ ಸ್ಪಷ್ಟನೆ

Ad Code

ನಕಲಿ ಲಿಂಕ್‌ಗಳನ್ನು ನಂಬಿ ಮೋಸ ಹೋಗಬೇಡಿ: ಅಂಚೆ ಇಲಾಖೆ ಸ್ಪಷ್ಟನೆ


ಹೊಸದಿಲ್ಲಿ: ಅಂಚೆ ಇಲಾಖೆಯ ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿ, ನಕಲಿ ಸಮೀಕ್ಷೆಗಳು, ರಸಪ್ರಶ್ನೆಗಳ ಮೂಲಕ ಜನರಿಗೆ ಆಮಿಷವೊಡ್ಡಿ ಅವರ ಖಾಸಗಿ ಮಾಹಿತಿಗಳನ್ನು ಲಪಟಾಯಿಸುವ ದಂಧೆ ಕೆಲವು ದಿನಗಳಿಂದ ವ್ಯಾಪಕವಾಗಿ ನಡೆದಿದೆ. ಇದರ ಬಗ್ಗೆ ಸ್ವತಃ ಅಂಚೆ ಇಲಾಖೆಯೇ ಸ್ಪಷ್ಟನೆ ನೀಡಿದ್ದು, ತಾನು ಯಾವುದೇ ರೀತಿಯ ಸಮೀಕ್ಷೆ, ರಸಪ್ರಶ್ನೆಯಂತಹವುಗಳನ್ನು ನಡೆಸುತ್ತಿಲ್ಲ,, ಬಹುಮಾನವನ್ನೂ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.


ಕೆಲವು ದಿನಗಳಿಂದ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒಂದೇ ತೆರನಾದ ಹಲವು ನಕಲಿ ವೆಬ್‌ಸೈಟ್‌ ಲಿಂಕ್‌ಗಳು ಅಂಚೆ ಇಲಾಖೆಯ ಸ್ಪರ್ಧಾತ್ಮಕ ಯೋಜನೆಗಳ ಹೆಸರಿನಲ್ಲಿ ಹರಿದಾಡುತ್ತಿವೆ.


ಉಚಿತವಾಗಿ ಸಿಗುವುದಾದರೆ ಏನು ಬೇಕಾದರೂ ಮಾಡುತ್ತೇವೆ ಎನ್ನುವ ಕೆಲವು ದುರಾಸೆಯ ಮಂದಿ ಇಂತಹವರ ಜಾಲಕ್ಕೆ ಬಿದ್ದು ನಕಲಿ ಲಿಂಕ್‌ಗಳನ್ನು ಹಂಚುತ್ತಲೇ ಇದ್ದಾರೆ. ಇಂಥವರ್ನು ಎಚ್ಚರಿಸುವುದಕ್ಕಾಗಿಯೇ ಅಂಚೆ ಇಲಾಖೆ ಸ್ಪಷ್ಟನೆ ನೀಡಿದ್ದು, ಅದರ ಪೂರ್ಣ ವಿವರ ಇಲ್ಲದೆ.


ಕೆಲವು ಸಮೀಕ್ಷೆಗಳು, ರಸಪ್ರಶ್ನೆಗಳ ಮೂಲಕ ಸಬ್ಸಿಡಿಗಳು/ಬಹುಮಾನಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಮೋಸದ URL/ವೆಬ್‌ಸೈಟ್‌ಗಳ ವಿರುದ್ಧ ಇಂಡಿಯಾ ಪೋಸ್ಟ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ


ಕೆಲವು ಸಮೀಕ್ಷೆಗಳು, ರಸಪ್ರಶ್ನೆಗಳ ಮೂಲಕ ಸರ್ಕಾರಿ ಸಬ್ಸಿಡಿಗಳನ್ನು ನೀಡುವುದಾಗಿ ಹೇಳಿಕೊಳ್ಳುತ್ತಿರುವ ವಾಟ್ಸಾಪ್, ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಮತ್ತು ಇಮೇಲ್‌ಗಳು / ಎಸ್‌ಎಂಎಸ್‌ಗಳ ಮೂಲಕ ಸಣ್ಣ URL ಗಳು / ಕಿರು URL ಗಳ ಮೂಲಕ ಪ್ರಸಾರವಾಗುತ್ತಿರುವ ವಿವಿಧ URL ಗಳು/ ವೆಬ್‌ಸೈಟ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಇಂಡಿಯಾ ಪೋಸ್ಟ್ ಗಮನಿಸುತ್ತಿದೆ.


ಸಮೀಕ್ಷೆಗಳು ಇತ್ಯಾದಿಗಳ ಆಧಾರದ ಮೇಲೆ ಸಬ್ಸಿಡಿಗಳು, ಬೋನಸ್ ಅಥವಾ ಬಹುಮಾನಗಳನ್ನು ಘೋಷಿಸುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾರತ ಪೋಸ್ಟ್ ತೊಡಗಿಸಿಕೊಂಡಿಲ್ಲ ಎಂದು ನಾವು ದೇಶದ ನಾಗರಿಕರಿಗೆ ತಿಳಿಸಲು ಬಯಸುತ್ತೇವೆ. ಅಂತಹ ಅಧಿಸೂಚನೆಗಳು/ ಸಂದೇಶಗಳು/ ಇಮೇಲ್‌ಗಳನ್ನು ಸ್ವೀಕರಿಸುವ ಸಾರ್ವಜನಿಕರಿಗೆ ಇಂತಹ ನಕಲಿಗಳನ್ನು ನಂಬಬೇಡಿ ಅಥವಾ ಪ್ರತಿಕ್ರಿಯಿಸಬೇಡಿ. ನಕಲಿ ಸಂದೇಶಗಳನ್ನು ನಂಬಿ ಯಾವುದೇ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ.. ಹುಟ್ಟಿದ ದಿನಾಂಕ, ಖಾತೆ ಸಂಖ್ಯೆಗಳು, ಮೊಬೈಲ್ ಸಂಖ್ಯೆಗಳು, ಹುಟ್ಟಿದ ಸ್ಥಳ ಮತ್ತು ಒಟಿಪಿ ಯಂತಹ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments