ನೀಟ್‌: ಗೋವಾದಲ್ಲಿ ಪ್ರಥಮ ಸ್ಥಾನ ಪಡೆದ ಅನುಷ್ಕಾ ಕುಲಕರ್ಣಿಗೆ ಸನ್ಮಾನ

Ad Code

ನೀಟ್‌: ಗೋವಾದಲ್ಲಿ ಪ್ರಥಮ ಸ್ಥಾನ ಪಡೆದ ಅನುಷ್ಕಾ ಕುಲಕರ್ಣಿಗೆ ಸನ್ಮಾನ





ಪಣಜಿ: ಹೆಣ್ಣೊಂದು ಕಲಿತರೆ ಇಡೀ ವಿಶ್ವವೇ ಕಲಿತಂತೆ. ಅನುಷ್ಕಾ ಕುಲಕರ್ಣಿ ರವರು ತಮ್ಮ ಸಣ್ಣ ವಯಸ್ಸಿನಲ್ಲಿ ಇಂತಹ ದೊಡ್ಡ ಸಾಧನೆಗೈದಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಬೆಳಗಾವಿ ಅಥಣಿಯ ಗುರುದೇವ ಆಶ್ರಮದ ಶ್ರೀ ಆತ್ಮಾರಾಮ ಸ್ವಾಮೀಜಿ ನುಡಿದರು.

ವಿಜಯಪುರ ಮೂಲದ ಅನುಷ್ಕಾ ಕುಲಕರ್ಣಿ ರವರು ನೀಟ್ ಪರೀಕ್ಷೆಯಲ್ಲಿ ಗೋವಾದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ವತಿಯಿಂದ ಪಣಜಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದ ದೆಂಪೊ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅನುಷ್ಕಾ ಕುಲಕರ್ಣಿ ಈ ಕನ್ನಡದ ಕುವರಿ ನೀಟ್ ಪರೀಕ್ಷೆಯಲ್ಲಿ ಗೋವಾಕ್ಕೆ ಪ್ರಥಮ ಸ್ಥಾನ ಮತ್ತು ಭಾರತಕ್ಕೆ 24 ನೇಯ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ವಿಜಯಪುರದ ಹಿರೀಯ ನಾಯಕರಾದ ಎಂ.ಬಿ ಪಾಟೀಲ್ ರವರು ಗೋವಾದಲ್ಲಿ ಸಾಧನೆಗೈದ ಕನ್ನಡದ ಕುವರಿಯ ಸಾಧನೆ ಗುರುತಿಸಿ ಪ್ರೋತ್ಸಾಹಿತಬೇಕು ಎಂದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡದ ಕುವರಿ ಅನುಷ್ಕಾಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುಷ್ಕಾ ಕುಲಕರ್ಣಿ- ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನನ್ನನ್ನು ಸನ್ಮಾನಿಸಿರುವುದು ನನಗೆ ಸಂತಸ ತಂದಿದೆ. ನಾನು ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದೇನೆ ಇದಕ್ಕೆ ಎಲ್ಲರ ಆಶೀರ್ವಾದ ಇರಲಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಪ್ರಕಾಶ್ ಭಟ್, ಸಾಹಿತ್ಯ ಪರಿಷತ್ ಮಹಿಳಾ ಪ್ರತಿನಿಧಿ ಕಾಂಚನಾ ಜೋಶಿ, ಸಿ.ಕೆ. ಜೋಶಿ, ಹಿರೀಯ ಕನ್ನಡಿಗ ಹನುಂತ ಗೊರವರ್, ಬಂಜಾರ ಸಮಾಜದ ಕರ್ನಾಟಕ ರಾಜ್ಯಾಧ್ಯಕ್ಷ ಸುರೇಶ್ ಚೌಹಾಣ್, ಬಂಜಾರ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಶಂಕರ ರಾಠೋಡ್, ಪತ್ರಕರ್ತ ಅನೀಲ್ ಸನದಿ,  ವಿದ್ಯಾರ್ಥಿನಿ ಅನುಷ್ಕಾಳ ತಂದೆ ಆನಂದ ಕುಲಕರ್ಣಿ, ಅಜ್ಜ ಹನುಮಂತ ಕುಲಕರ್ಣಿ, ಅಜ್ಜಿ ವೀಣಾ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ಮಹಿಳಾ ಪ್ರತಿನಿಧಿ ಕಾಂಚನಾ ಜೋಶಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. 

web counter

Post a Comment

0 Comments