ದೇಶವಾಸಿಗಳ 'ಕ್ಯಾನ್‌ ಡು ಕಲ್ಚರ್‌' ಪ್ರೇರಣಾದಾಯಿ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

Ad Code

ದೇಶವಾಸಿಗಳ 'ಕ್ಯಾನ್‌ ಡು ಕಲ್ಚರ್‌' ಪ್ರೇರಣಾದಾಯಿ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ



ಪ್ರಧಾನಿ ಮೋದಿ ಮನ್ ಕಿ ಬಾತ್ 81ನೇ ಆವೃತ್ತಿ: ಮುಖ್ಯಾಂಶಗಳು.


ನಮ್ಮ ಭಾರತೀಯ ಸಂಪ್ರದಾಯದಲ್ಲಿ, ನಾವು ನದಿಗಳನ್ನು ತಾಯಿ ಎಂದು ಕರೆಯುತ್ತೇವೆ. ನಮ್ಮ ಶಾಸ್ತ್ರಗಳಲ್ಲಿ, ನದಿಗಳಲ್ಲಿನ ಸಣ್ಣ ಮಾಲಿನ್ಯವನ್ನು ಕೂಡ ತಪ್ಪು ಎಂದು ಪರಿಗಣಿಸಲಾಗುತ್ತದೆ: ಪ್ರಧಾನಿ ಮೋದಿ.


ಸೆಪ್ಟೆಂಬರ್ ಒಂದು ಪ್ರಮುಖ ತಿಂಗಳು, ನಾವು ವಿಶ್ವ ನದಿ ದಿನವನ್ನು ಆಚರಿಸುವ ತಿಂಗಳು. ನಿಸ್ವಾರ್ಥವಾಗಿ ನಮಗೆ ನೀರನ್ನು ಒದಗಿಸುವ ನಮ್ಮ ನದಿಗಳ ಕೊಡುಗೆಯನ್ನು ಸ್ಮರಿಸುವ ದಿನ: ಪ್ರಧಾನಿ ನರೇಂದ್ರ ಮೋದಿ


ನಾವು ಇಂದು ವಿಶ್ವ ನದಿ ದಿನವನ್ನು ಆಚರಿಸುತ್ತಿರುವಾಗ, ದೇಶದಾದ್ಯಂತ ಇರುವ ಜನರಿಗೆ ವರ್ಷಕ್ಕೊಮ್ಮೆಯಾದರೂ 'ನದಿ ಹಬ್ಬ' ಆಚರಿಸುವಂತೆ ನಾನು ಒತ್ತಾಯಿಸುತ್ತೇನೆ: ಪ್ರಧಾನಿ ನರೇಂದ್ರ ಮೋದಿ



ನಾನು ಸ್ವೀಕರಿಸಿದ ಉಡುಗೊರೆಗಳ ವಿಶೇಷ ಇ-ಹರಾಜು ಈ ದಿನಗಳಲ್ಲಿ ನಡೆಯುತ್ತಿದೆ. ಅದರಿಂದ ಬರುವ ಆದಾಯವನ್ನು 'ನಮಾಮಿ ಗಂಗೆ' ಅಭಿಯಾನಕ್ಕೆ ಮೀಸಲಿಡಲಾಗುವುದು: ಪ್ರಧಾನಿ ಮೋದಿ


ಗುಜರಾತಿನ ಸಬರಮತಿ ನದಿ ಬತ್ತಿ ಹೋಗಿತ್ತು. ಆದರೆ ನದಿ ಜೋಡಣೆಯಿಂದಾಗಿ ನದಿಯನ್ನು ಪುನಶ್ಚೇತನಗೊಳಿಸಲಾಗಿದೆ. ಮತ್ತು ಅದು ಈಗ ವರ್ಷಪೂರ್ತಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ: ಪ್ರಧಾನಿ ಮೋದಿ


ಶುಚಿತ್ವವು ತಲೆಮಾರುಗಳ ಮೂಲಕ ಮೌಲ್ಯಗಳನ್ನು ವರ್ಗಾಯಿಸುವ ಜವಾಬ್ದಾರಿಯಾಗಿದೆ ಮತ್ತು ಅದನ್ನು ಅನುಸರಿಸುತ್ತಿರುವಾಗ, ಅದು ಇಡೀ ಸಾಮಾಜಿಕ ಜೀವನದ ಲಕ್ಷಣವಾಗುತ್ತದೆ: ಪ್ರಧಾನಿ ಮೋದಿ.


ಖಾದಿ ಉತ್ಪನ್ನಗಳನ್ನು ಖರೀದಿಸಿ ಮತ್ತು ಮಹಾತ್ಮ ಗಾಂಧಿಯವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ಪ್ರಧಾನಿ ಮೋದಿ ಜನರನ್ನು ಕೋರಿದ್ದಾರೆ.


ಜನ್ ಧನ್ ಯೋಜನೆ ಅಡಿಯಲ್ಲಿ, ಬಡವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ, ಇದರಿಂದಾಗಿ ಭ್ರಷ್ಟಾಚಾರ ಬಹಳ ಕಡಿಮೆಯಾಗಿದೆ: ಪ್ರಧಾನಿ ಮೋದಿ


ಹಣಕಾಸಿನ ಸ್ವಚ್ಛತೆಗೆ ತಂತ್ರಜ್ಞಾನ ಸಹಾಯ ಮಾಡುತ್ತದೆ ನಿಜ. ಇತ್ತೀಚಿನ ದಿನಗಳಲ್ಲಿ, ಹಳ್ಳಿಗಳಲ್ಲಿ ಜನರು ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಸಮರ್ಥರಾಗಿದ್ದಾರೆ: ಪಿಎಂ ಮೋದಿ


ಕಳೆದ ಒಂದು ತಿಂಗಳಲ್ಲಿ 355 ಕೋಟಿ ಯುಪಿಐ ವಹಿವಾಟುಗಳು ನಡೆದಿವೆ. ಈ ರೀತಿಯಾಗಿ, ಹಣಕಾಸು ತಂತ್ರಜ್ಞಾನವು ಹೇಗೆ ಗಣನೀಯವಾಗಿ ಏರಿದೆ ಎಂಬುದನ್ನು ನಾವು ನೋಡಬಹುದು: ಪ್ರಧಾನಿ ಮೋದಿ


ನಮ್ಮ ದೇಶದ ಜನರಲ್ಲಿ ಕ್ಯಾನ್‌ ಡು ಕಲ್ಚರ್‌- ನಾವು ಮಾಡಲು ಸಾಧ್ಯ-ಅನ್ನುವ ಸಂಸ್ಕೃತಿ,  ಕ್ಯಾನ್ ಡು ಡಿಟರ್ಮಿನೇಶನ್- ದೃಢ ನಿರ್ಧಾರ ಮಾಡಲು ನಮಗೂ ಸಾಧ್ಯ-, ಮತ್ತು ಕ್ಯಾನ್ ಡು ಆಟಿಟ್ಯೂಡ್- ಮಾಡಲು ಸಾಧ್ಯ ಎಂಬ ಧೋರಣೆ- ಎದ್ದು ಕಾಣುತ್ತಿದೆ. ಇದು ಕೋಟ್ಯಂತರ ಜನರಿಗೆ ಪ್ರೇರಣಾದಾಯಕವಾಗಿದೆ.


ಉತ್ತರ ಪ್ರದೇಶದಲ್ಲಿ 'ಒಬ್ಬ ಶಿಕ್ಷಕ, ಒಂದು ಕರೆ' ಉಪಕ್ರಮವು ಶ್ಲಾಘನೀಯ: ಪ್ರಧಾನಿ ಮೋದಿ


'ಬಾಪು' (ಮಹಾತ್ಮ ಗಾಂಧಿ) ಸ್ವಚ್ಛತೆಯ ಪ್ರತಿಪಾದಕರಾಗಿದ್ದರು, ಅವರು ಸ್ವಚ್ಛತೆಯನ್ನು ಒಂದು ಸಾಮೂಹಿಕ ಚಳುವಳಿಯನ್ನಾಗಿ ಮಾಡಿದರು ಮತ್ತು ಅದನ್ನು ಸ್ವಾತಂತ್ರ್ಯದ ಕನಸಿನೊಂದಿಗೆ ಸಂಯೋಜಿಸಿದರು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ


ಹಬ್ಬಗಳು ಸಮೀಪಿಸುತ್ತಿವೆ, ನಾವು ಕೋವಿಡ್‌ನೊಂದಿಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ. 'ಟೀಮ್ ಇಂಡಿಯಾ' ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ಮಾಡಿದ ಲಸಿಕೆ ತಯಾರಿಯೂ ಸೇರಿದಂತೆ. ಯಾರೂ ಈ 'ಸುರಕ್ಷಾ ಚಕ್ರ'ದಿಂದ ದೂರವಿರಬಾರದು, ಪ್ರೋಟೋಕಾಲ್‌ಗಳು ಇರಬೇಕು, ಎಲ್ಲರೂ ಅವುಗಳನ್ನು ಅನುಸರಿಸಬೇಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ.

Post a Comment

0 Comments