"ನನ್ನ ಸರ್ಕಾರ ಪಕ್ಷದ ಹಿತಕ್ಕಾಗಿ ಆಡಳಿತ ನಡೆಸುತ್ತಿಲ್ಲ, ಬದಲಾಗಿ ದೇಶದ ಹಿತಕ್ಕಾಗಿ ಸರ್ಕಾರ ನಡೆಸುತ್ತಿದೆ" ಅನ್ನುವ ಮಾತು ಇಂದು ಪ್ರತಿಯೊಬ್ಬರೂ ಮನನ ಮಾಡಬೇಕಾದ ಮಾತು ಅನ್ನುವುದು ಅವರ ಏಳು ವರುಷಗಳ ಅಧಿಕಾರ ಅವಧಿಯಲ್ಲಿ ಸ್ವಷ್ಟವಾಗಿ ಮೂಡಿ ಬಂದಿದೆ. ಈ ಕುರಿತಾಗಿ ನಾವು ಸಂವಿಧಾನದ ಹಿನ್ನೆಲೆಯಲ್ಲಿ ದೇಶದ ಏಕತೆ ಭದ್ರತೆ ಅಭಿವೃದ್ಧಿಯ ದೃಷ್ಟಿಯಿಂದ ಚಿಂತನೆ ಮಾಡಬೇಕಾಗಿದೆ.
ನಮ್ಮ ಸಂವಿಧಾನದ ಆಶಯವೂ ಅಷ್ಟೇ; ಈ ದೇಶ ಒಂದಾಗಿ ಬಲಿಷ್ಠವಾಗಿ ಇರಬೇಕಾದರೆ ಸಮರ್ಥ ಬಲಿಷ್ಠವಾದ ಪ್ರಜಾಸತ್ತಾತ್ಮಕ ಸರಕಾರದ ಅನಿವಾರ್ಯತೆ ಇದೆ ಅನ್ನುವುದನ್ನು ಹಲವು ಸಂದರ್ಭದಲ್ಲಿ ಸಂವಿಧಾನ ಸ್ವಷ್ಟವಾಗಿ ಹೇಳಿದೆ. ಸಂವಿಧಾನದ ಯಾವ ಭಾಗದಲ್ಲೂ ಅಸಮರ್ಥ ಕೇಂದ್ರ ಸರ್ಕಾರ ಇರಬೇಕು ಅನ್ನುವುದನ್ನು ಪ್ರತಿಪಾದಿಸಿಲ್ಲ. ಅಂದರೆ ರಾಜ್ಯ ಸರಕಾರದ ಅಡಿ ಆಳಾಗಿ ಇರುವ ಕೇಂದ್ರ ಸರ್ಕಾರ ಬೇಕೆನ್ನುವುದನ್ನು ಎಲ್ಲಿಯೂ ಹೇಳಿಲ್ಲ. ಮಾತ್ರವಲ್ಲ ಈ ವಾದ ಕೂಡಾ ಭಾರತದಂತಹ ವೈವಿಧ್ಯಪೂರ್ಣ ಭಾಷೆ ಇತಿಹಾಸ ರಾಜಕೀಯ ಹಿನ್ನಲೆ ಭೌಗೋಳಿಕತೆ ಇರುವ ದೇಶದಲ್ಲಿ ಕೇಂದ್ರ ಸರ್ಕಾರ ಅಸಮರ್ಥವಾಗಿ ಬಿಟ್ಟರೆ ಮುಂದಿನ ಪರಿಸ್ಥಿತಿ ಊಹಿಸಲು ಅಸಾಧ್ಯ.
ಈ ಅನುಭವ ಸ್ವಾತಂತ್ರ್ಯದ ಮೊದಲ ಕಾಲ ಘಟ್ಟದಲ್ಲಿ ಗಣರಾಜ್ಯ ಸ್ಥಾಪನಾ ಸಂದರ್ಭದಲ್ಲಿ ನಮ್ಮ ಹಿರಿಯರು ಮತ್ತು ಸಂವಿಧಾನದ ನಿರ್ಮಾತೃಗಳು ಸಾಕಷ್ಟು ನೇೂವು ವೇದನೆ ಅನುಭವಿಸಿದ್ದರು ಅನ್ನುವ ಇತಿಹಾಸವನ್ನು ಇಂದು ನಾವು ಮರೆತಿದ್ದೇವೆ ಅನ್ನುವುದನ್ನು ಇಂದಿನ ಕೆಲವರ ಮಾತಿನಿಂದ ಸ್ವಷ್ಟವಾಗುತ್ತಿದೆ. ಬಲಿಷ್ಠ ಭಾರತ ನಮ್ಮ ನಿಮ್ಮ ಬದುಕಿನ ಸುಭದ್ರತಾ ದೃಷ್ಟಿಯಿಂದ ಅತೀ ಅಗತ್ಯ ಕೂಡಾ. ಇಂತಹ ಪರಿಕಲ್ಪನೆಯಲ್ಲಿಯೇ ಮೇೂದಿ ಸರಕಾರದ ಹಲವು ಚಿಂತನೆಗಳು ಕಾಯ೯ರೂಪಕ್ಕೆ ಬಂದಿದೆ ಅನ್ನುವುದು ಜನ ಸಾಮಾನ್ಯರ ಗಮನಕ್ಕೂ ಬಂದಿದೆ.
ಭಾರತದ ಸಂವಿಧಾನದ ಮೆಾದಲ ವಿಧಿಯೇ ಹೇಳುವಂತೆ "India is a union of States" ಅನ್ನುವುತ್ತದೆ ಹೊರತು ಫೆಡರಲ್ ಅನ್ನುವ ಪದವನ್ನು ಎಲ್ಲಿಯೂ ಬಳಸಿಲ್ಲ. ನಮ್ಮ ಸಂವಿಧಾನದ ರಚನಾಕಾರರು ಕೂಡಾ ತುಂಬಾ ಜಾಗ್ರತೆಯಿಂದ ಬಲಿಷ್ಠ ಕೇಂದ್ರದ ಕಟ್ಟು ಪಾಡುಗಳಿಗೆ ಅನುಕೂಲಕರವಾದ ರೀತಿಯಲ್ಲಿಯೇ ಸಂವಿಧಾನದ ಅನುಚ್ಛೇದಗಳನ್ನು ಹಂಚಿ ಹಾಕಿದ್ದಾರೆ. ಕೇಂದ್ರ ಪಟ್ಟಿಗೆ ಹೆಚ್ಚು ಪ್ರಾಶಸ್ತ್ಯ; ರಾಜ್ಯಪಾಲರ ನೇಮಕಾತಿ. ಕೇಂದ್ರ ಲೇೂಕ ಸೇವಾ ಆಯೇೂಗದ ಮೂಲಕ ಉನ್ನತವಾದ ಆಡಳಿತಾತ್ಮಕ ಹುದ್ದೆಗಳ ಭರ್ತಿ ಇತ್ಯಾದಿ.
ಒಂದು ವೇಳೆ ಇಂತಹ ಬಲಿಷ್ಠ ಕೇಂದ್ರ ಸರಕಾರದ ಪರಿಕಲ್ಪನೆ ನಮ್ಮ ಸಂವಿಧಾನದಲ್ಲಿ ಮೂಡಬಾರದೇ ಇದ್ದಿದ್ದರೆ ಈ ದೇಶ ಇಂದು ಒಂದಾಗಿರಲು ಸಾಧ್ಯನೇ ಇಲ್ಲ ಅನ್ನುವುದು ನಮ್ಮ ಹಿಂದಿನ ಹತ್ತು ಹಲವು ಸಂದರ್ಭದಲ್ಲಿ ನಾವು ಅನುಭವಿಸಿ ಕೊಂಡು ಕಹಿ ಸತ್ಯವೂ ಹೌದು.
ನಮ್ಮ ಸಂವಿಧಾನ ಕಂಡುಕೊಂಡ ಈ ಆಶಯಗಳವನ್ನು ಸಾಕಾರಗೊಳಿಸಲು ಪ್ರಧಾನಿ ಮೇೂದಿಯವರು ತೆಗೆದುಕೊಂಡ ಕೆಲವು ನಿರ್ಧಾರಗಳು ಅವರ ಪಕ್ಷಕ್ಕೂ ಆಥವಾ ಇನ್ಯಾವುದೇ ಪಕ್ಷ ಹಿತಕರವಾಗಿರದೇ ಇರ ಬಹುದು ಆದರೆ ದೇಶದ ಏಕತೆ ಸಮಗ್ರತೆಯ ದೃಷ್ಟಿಯಿಂದ ದೇಶಕ್ಕೆ ಹಿತಕರವಾದ ನಿರ್ಧಾರವೇ ಆಗಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ.
ಉದಾ: ಸಂವಿಧಾನದ 370 ಮತ್ತು 35A ನೇ ವಿಧಿಗೆ ಇತಿಶ್ರೀ ಹಾಡಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿ ಮಾಡಿರುವುದು. ಪೌರತ್ವ ಕಾಯಿದೆಗೆ ತಿದ್ದುಪಡಿ ಒಂದು ರಾಷ್ಟ್ರ ಒಂದು ತೆರಿಗೆ, ಇನ್ನೂ ಮುಂದಿನ ಏಕ ರಾಷ್ಟ್ರ ಏಕ ಚುನಾವಣೆ, ಸಮಾನ ನಾಗರಿಕ ಸಂಹಿತೆ ಇವೆಲ್ಲವೂ ಭಾರತದ ತನುಜಾತರನ್ನು ಒಂದಾಗಿಸುವ ನಿರ್ಣಯಗಳು. ಇಂದಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೂಡಾ ಪ್ರಾದೇಶಿಕತೆಗೆ ಒತ್ತು ನೀಡುವುದರ ಜೊತೆಗೆ ರಾಷ್ಟೀಯತೆಯ ಭಾವನೆಗಳನ್ನು ಮೂಡಿಸುವ ಸಂಕಲ್ಪನೆ ಈ ಶಿಕ್ಷಣ ನೀತಿಯಲ್ಲಿ ಸ್ವಷ್ಟವಾಗಿ ಕಾಣುತ್ತಿದೆ.
ಪ್ರಾದೇಶಿಕತೆಯ ಗಟ್ಟಿತನದ ಜೊತೆಗೆ ರಾಷ್ಟ್ರೀಯ ಭದ್ರತೆ ಅಭಿವೃದ್ಧಿ ಮೂಡಿಬಂದಾಗ ನಾವು ಭಾರತೀಯರು ಅನ್ನುವ ಮನೇೂಭಾವ ಸಹಜವಾಗಿ ಎಲ್ಲರಲ್ಲೂ ಮೂಡಿ ಬರಲು ಸಾಧ್ಯ ಅನ್ನುವುದು ನಮ್ಮ ಸಂವಿಧಾನದ ಪರಮ ಆಶಯವೂ ಹೌದು.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments