ವಾಟ್ಸ್‌ಆ್ಯಪ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಕುಸಿತದಿಂದ ಮಾರ್ಕ್ ಜುಕರ್‌ಬರ್ಗ್ $ 7 ಬಿಲಿಯನ್ ನಷ್ಟ

Ad Code

ವಾಟ್ಸ್‌ಆ್ಯಪ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಕುಸಿತದಿಂದ ಮಾರ್ಕ್ ಜುಕರ್‌ಬರ್ಗ್ $ 7 ಬಿಲಿಯನ್ ನಷ್ಟ



ನ್ಯೂಯಾರ್ಕ್‌:  ಜಗತ್ತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನ ಕುಸಿತದಿಂದಾಗಿ ಕೆಲವೇ ಗಂಟೆಗಳಲ್ಲಿ ಅವುಗಳ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಸುಮಾರು $ 7 ಬಿಲಿಯನ್‌ಗಳಷ್ಟು ಕುಸಿತ ಕಂಡಿತು. ಇದು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು.


ಸೋಷಿಯಲ್ ಮೀಡಿಯಾ 'ದೈತ್ಯ' ಷೇರುಗಳು ಸುಮಾರು 5% ನಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯಭಾಗದಿಂದ 15% ಕುಸಿತವನ್ನು ಸೇರಿಸಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಇದು ಬಿಲಿಯನೇರ್‌ಗಳಲ್ಲಿ ಐದನೇ ಸ್ಥಾನವನ್ನು ಜುಕರ್‌ಬರ್ಗ್‌ಗೆ ನೀಡಿದೆ. ಈಗ, ಅವರು ಬಿಲ್ ಗೇಟ್ಸ್‌ರ ನಂತರ 120.9 ಬಿಲಿಯನ್ ಡಾಲರ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.


ಡೌನ್ ಡಿಟೆಕ್ಟರ್ ಪೋರ್ಟಲ್‌ ವರದಿಯ ಪ್ರಕಾರ, ಈ ವೇದಿಕೆಗಳಲ್ಲಿನ ತಾಂತ್ರಿಕ ಸಮಸ್ಯೆಗಳು ವಿವಿಧ ಯುರೋಪಿಯನ್, ಏಷ್ಯನ್, ಲ್ಯಾಟಿನ್ ಅಮೇರಿಕನ್ ಮತ್ತು ಉತ್ತರ ಅಮೆರಿಕಾದ ದೇಶಗಳಲ್ಲಿ ಸಂಭವಿಸಿವೆ. 



ನೆಟ್‌ವರ್ಕ್‌ಗಳ ಕುಸಿತ, ದೂರುಗಳ ಸರಣಿಯ ನಡುವೆ


ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಫೇಸ್‌ಬುಕ್ ಮಾಲೀಕತ್ವದ ಸಾಮಾಜಿಕ ಜಾಲತಾಣಗಳು ಉಂಟುಮಾಡುತ್ತಿರುವ ಸಮಸ್ಯೆಗಳ ಬಗ್ಗೆ ಸರಣಿ ಕಥೆಗಳನ್ನು ಪ್ರಕಟಿಸಿತು, ಈ ಸಮಸ್ಯೆಗಳು  ಫೇಸ್ಬುಕ್ ಗೆ ತಿಳಿದಿದೆ ಎಂದೂ ಬಹಿರಂಗಪಡಿಸಿತು, ಉದಾಹರಣೆಗೆ ಹದಿಹರೆಯದವರ ಮಾನಸಿಕ ಆರೋಗ್ಯಕ್ಕೆ Instagram ನಿಂದ ಹಾನಿ ಮತ್ತು COVID-19 ನಂತಹ ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ಅಥವಾ 2021 ರ ಆರಂಭದಲ್ಲಿ ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಸಂಭವಿಸಿದ ಗಲಭೆಗಳು ಈ ಸಾಮಾಜಿಕ ಜಾಲತಾಣಗಳಿಂದಲೇ ಉಂಟಾಗಿವೆ ಎಂದು ಪ್ರಸ್ತುತಪಡಿಸಲಾಯಿತು.



"60 ನಿಮಿಷಗಳು" ಎಂಬ ಟಿವಿ ಕಾರ್ಯಕ್ರಮದ ಸಂದರ್ಶನವೊಂದರಲ್ಲಿ, ಆ ದಾಖಲೆಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿದ ಮಾಜಿ ಫೇಸ್‌ಬುಕ್ ಉದ್ಯೋಗಿ ಫ್ರಾನ್ಸಿಸ್ ಹೌಗೆನ್, ಕಂಪನಿಯಲ್ಲಿ ತಾನಿದ್ದ ಸಮಯದಲ್ಲಿ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಂದ "ಗಾಬರಿಗೊಂಡಿದ್ದಾಗಿ" ವಿವರಿಸಿದಳು. "ಸಾರ್ವಜನಿಕ ಸುರಕ್ಷತೆಗಿಂತ ಕಂಪನಿಯ ಲಾಭವನ್ನೇ ಮುಂದಿಟ್ಟು ವ್ಯವಹರಿಸಲಾಗುತ್ತಿದೆ ಮತ್ತು ಜನರ ಜೀವಕ್ಕೆ ಅಪಾಯವಿದೆ" ಎಂದು ಆಕೆ ದೂರಿದ್ದಳು.



ಸಂದರ್ಶನದಲ್ಲಿ, ಹೌಗೆನ್ ಅವರು ಕಂಪನಿಯೊಂದಿಗೆ ಕೋಪಗೊಂಡ ನಂತರ ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್ ಅನ್ನು ತೊರೆದಿದ್ದಾರೆ ಎಂದು ಹೇಳಿದಳು. ಉದ್ಯೋಗ ತೊರೆಯುವ ಮುನ್ನ ಕಂಪನಿ ತನಗೆ ನೀಡಿದ ಸರಣಿ ಮೆಮೊಗಳು ಮತ್ತು ಆಂತರಿಕ ದಾಖಲೆಗಳನ್ನು ಬಹಿರಂಗಪಡಿಸಿದಳು.


ಹೌಗೆನ್ ನಂತರ ಆ ಡಾಕ್ಯುಮೆಂಟ್‌ಗಳ ಸಾವಿರಾರು ಪುಟಗಳನ್ನು ವಾಲ್ ಸ್ಟ್ರೀಟ್ ಜರ್ನಲ್‌ನೊಂದಿಗೆ ಹಂಚಿಕೊಂಡರು, ಕಳೆದ ಮೂರು ವಾರಗಳಿಂದ ಪತ್ರಿಕೆ ಅದರ ಆಯ್ದ ಭಾಗಗಳನ್ನು ಪ್ರಕಟಿಸಿದೆ. ಈಗ "ಫೇಸ್ಬುಕ್ ಫೈಲ್ಸ್" ಎಂದು ಜನಪ್ರಿಯವಾಗಿರುವ ಡಾಕ್ಯುಮೆಂಟ್‌ಗಳು, ವಿಐಪಿಗಳು ಅಥವಾ ಸೆಲೆಬ್ರಿಟಿಗಳಿಗೆ ಕಂಪನಿಯು ಮಿತಗೊಳಿಸುವ ನೀತಿಗಳನ್ನು ಅನ್ವಯಿಸುವುದಿಲ್ಲ ಎಂದು ತೋರಿಸಿದೆ.


ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಒಂದು ವರದಿಯ ಪ್ರಕಾರ, ಫೇಸ್‌ಬುಕ್‌ನ ಅಲ್ಗೋರಿಥಮ್ ಬಳಕೆದಾರರಲ್ಲಿ ಒಡಕು ಮತ್ತು ಆಕ್ರೋಶವನ್ನು ಉಂಟುಮಾಡುವ ಪೋಸ್ಟ್‌ಗಳಿಗೆ ಆದ್ಯತೆ ನೀಡಿರುವುದನ್ನು ಬಹಿರಂಗಪಡಿಸಿತು. ಉದ್ಯೋಗಿಗಳು ಅದನ್ನು ಸರಿಪಡಿಸಲು ಪ್ರಯತ್ನಿಸಿದಾಗ, ಅವರು ಮಾರ್ಕ್ ಜುಕರ್‌ಬರ್ಗ್ ಅವರ ಒತ್ತಡದಿಂದ  ಹಿಂಜರಿಕೆಯಬೇಕಾಯಿತು.  ಈ ಎಲ್ಲ ಕಾರಣಗಳು ಕಾಲಕ್ರಮೇಣ ಫೇಸ್‌ಬುಕ್‌ಗೆ ಭಾರೀ ಹೊಡೆತ ನೀಡಿವೆ.

Key words: WhatsApp, Facebook ಮತ್ತು Instagram

Post a Comment

0 Comments