ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಗಡಿಯನ್ನು ಕಾಯುವ ಭಾರತೀಯ ಯೋಧರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಭಾರತೀಯ ಯೋಧರನ್ನು ದೇಶವನ್ನು ಕಾಪಾಡುವ ಸುರಕ್ಷಾ ಕವಚ ಎಂದು ಬಣ್ಣಿಸಿದ್ದಾರೆ. ದೇಶದ ಜನತೆ ಶಾಂತಿ,ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಭಾರತೀಯ ಯೋಧರು ಕಾರಣ ಎಂದು ನುಡಿದರು.
ನಮ್ಮ ಯೋಧರು ಭಾರತ ಮಾತೆಯನ್ನು ರ ಸುರಕ್ಷಾ ಕವಚಗಳು. ಅವರಿಂದಾಗಿಯೇ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಭಾರತೀಯ ಯೋಧರನ್ನು ಉದ್ದೇಶಿಸಿ ಮಾತನಾಡಿ ಅವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರೊಂದಿಗೆ ನಾನು ಪ್ರತಿ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇನೆ. ನಾನು ಇಂದು ಕೋಟ್ಯಾಂತರ ಭಾರತೀಯರ ಆಶೀರ್ವಾದದ ಜೊತೆಗೆ ಇಲ್ಲಿಗೆ ಆಗಮಿಸಿದ್ದೇನೆ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ಗಡಿಯಲ್ಲಿನ ಆಧುನಿಕ ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿಸಿದ್ದು, ಇದರಿಂದ ಗಡಿಯಲ್ಲಿ ನಮ್ಮ ಸೇನೆ ಇನ್ನಷ್ಟು ಬಲಿಷ್ಠಗೊಂಡಿದೆ. ಜೊತೆಗೆ ಸೇನಾ ಸಾಮರ್ಥ್ಯ ಕೂಡಾ ಬದಲಾಗಿದೆ ಎಂದರು.
ಸರ್ಜಿಕಲ್ ದಾಳಿಯ ಸಂದರ್ಭದಲ್ಲಿ ಯೋಧರ ಸಾಮರ್ಥ್ಯವನ್ನು ಮೋದೀಜಿ ಕೊಂಡಾಡಿದರು. ಅದೇ ರೀತಿ ಮೋದಿಯವರು ಭಯೋತ್ಪಾದಕರ ಆಕ್ರಮಣಕ್ಕೆ 2016ರ ಸೆಪ್ಟೆಂಬರ್ 29ರಂದು ನಮ್ಮ ಯೋಧರು ನಡೆಸಿದ ಸರ್ಜಿಕಲ್ ದಾಳಿ ಸಮರ್ಥ ಪ್ರತ್ಯುತ್ತರವಾಗಿದೆ ಎಂದು ಹೇಳಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments