ಹೆಲಿಕಾಪ್ಟರ್ ಪತನಗೊಂಡಿದ್ದ ಊರನ್ನು ದತ್ತು ಪಡೆದ ಭಾರತೀಯ ಸೇನೆ

Ad Code

ಹೆಲಿಕಾಪ್ಟರ್ ಪತನಗೊಂಡಿದ್ದ ಊರನ್ನು ದತ್ತು ಪಡೆದ ಭಾರತೀಯ ಸೇನೆ

ಉದಕಮಂಡಲ (ತಮಿಳುನಾಡು): ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಹಿತ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದ ತಮಿಳುನಾಡಿನ ಕೂನೂರಿನ ನಂಜಪ್ಪ ಸದಿರಂ ಹಳ್ಳಿಯನ್ನು ಭಾರತೀಯ ಸೇನೆ ದತ್ತು ಪಡೆದಿದೆ. ದುರಂತ ಸಂಭವಿಸಿದಾಗ ಗ್ರಾಮಸ್ಥರು ಮಾಡಿದ ಸೇವೆಗೆ ಸೇನೆ ಧನ್ಯವಾದ ಸಲ್ಲಿಸಿದೆ.

ಈ ಕುರಿತು ಮಾಹಿತಿ ನೀಡಿದ ಜನರಲ್ ಆಫೀಸರ್ ಕಮಾಂಡಿಂಗ್ ಕೇಂದ್ರ ಕಚೇರಿ ದಕ್ಷಿಣ ಭಾರತದ ಲೆಫ್ಟಿನೆಂಟ್ ಜನರಲ್ ಎ. ಅರುಣ್ "ಅಪಘಾತದ ವೇಳೆ ಗ್ರಾಮಸ್ಥರು ಮಾಡಿದ ಸೇವೆ ಅಮೋಘವಾದದ್ದು. ಪ್ರಪಾತದಲ್ಲಿ ಸಿಲುಕಿದ್ದ ನಮ್ಮ ಯೋಧರನ್ನು ರಕ್ಷಿಸಲು ಮಾಡಿದ ಉಪಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಹಾಯವನ್ನು ಸ್ಮರಿಸುವುದಕ್ಕಾಗಿ ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಅಪಘಾತ ಕಂಡ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಇಬ್ಬರು ಗ್ರಾಮಸ್ಥರಿಗೆ ಸೇನೆ 5000 ನಗದು ಬಹುಮಾನ ನೀಡಿತು. ಜೊತೆಗೆ ಸ್ಥಳೀಯರಿಗೆ ಬ್ಲಾಂಕೆಟ್, ಪಡಿತರ ಸಾಮಾಗ್ರಿಗಳು, ಸೋಲಾರು ತುರ್ತು ದೀಪಗಳನ್ನು ವಿತರಿಸಲಾಯಿತು. 

Post a Comment

0 Comments