ಎರಡನೇ ಟೆಸ್ಟ್ ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್

Ad Code

ಎರಡನೇ ಟೆಸ್ಟ್ ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್


ಅಡಿಲೇಡ್: ಟೆಸ್ಟ್ ತಂಡದ ನಾಯಕನಾಗಿ ಪಂದ್ಯವನ್ನೇ ಗೆದ್ದುಕೊಂಡಿದ್ದ ಆಸೀಸ್ ನ ವೇಗಿ ಪ್ಯಾಟ್ ಕಮಿನ್ಸ್ ಅವರು ಎರಡನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಮಿನ್ಸ್ ನ ಅನುಪಸ್ಥಿತಿಯಲ್ಲಿ ಉಪನಾಯಕ ಸ್ಟೀವ್ ಸ್ಮಿತ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬಂದ ಕಾರಣದಿಂದ ಪ್ಯಾಟ್ ಕಮಿನ್ಸ್ ಅವರು ತಂಡದಿಂದ ದೂರವಾಗಿದ್ದಾರೆ. ಇವರ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆಯಾದರೂ ದಕ್ಷಿಣ ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ಅಡಿಯಲ್ಲಿ ಈಗ ಏಳು ದಿನಗಳವರೆಗೆ ಪ್ರತ್ಯೇಕವಾಗಿರಬೇಕಿದೆ.

2018 ರ ನಂತರ ಸ್ಟೀವ್ ಸ್ಮಿತ್ ಮೊದಲ ಬಾರಿಗೆ ತಂಡದ ನಾಯಕರಾಗಿದ್ದಾರೆ. ಅ್ಯಶಸ್ ಎರಡನೇ ಪಂದ್ಯ ಇಂದು ಅಡಿಲೇಡ್ ಓವಲ್ ನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಆಸೀಸ್ ಜಯಿಸಿದ್ದು ಸರಣಿಯಲ್ಲಿ 1-0 ಮುನ್ನಡೆಯಲಿದೆ.


Post a Comment

0 Comments