ಬಾಲಿವುಡ್‌- ಭಾರತ ವಿರೋಧಿಯೇ...? ದಿ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳುವುದನ್ನು ಕೇಳಿ...

Ad Code

ಬಾಲಿವುಡ್‌- ಭಾರತ ವಿರೋಧಿಯೇ...? ದಿ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳುವುದನ್ನು ಕೇಳಿ...



ಹಲವು ದಶಕಗಳಿಂದ ಬೆಳೆದು ಕೊಬ್ಬಿರುವ ಬಾಲಿವುಡ್‌ ಹಿಂದಿ ಚಿತ್ರರಂಗವನ್ನು ಆಳುತ್ತಿದೆ. ಆದರೆ ಈ ಬಾಲಿವುಡ್‌ ನಿರ್ಮಿಸುತ್ತಿರುವ ಚಿತ್ರಗಳು, ಬಾಲಿವುಡ್‌ನಲ್ಲಿ ಕೋಟಿಗಟ್ಟಲೆ ಸುರಿದು ಬಂಡವಾಳ ಹೂಡಿ ಚಿತ್ರ ನಿರ್ಮಿಸುವ ಮಂದಿಯ ಹಿಂದೆ ಇರುವವರು ಯಾರು? ಅಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳು ಎಂಥವು? ದೇಶದ ನಿರ್ಣಾಯಕ ಗಳಿಗೆಗಳಲ್ಲಿ ಬಾಲಿವುಡ್ ಬಾದಶಾಹ್‌ಗಳು ತಳೆಯುತ್ತಿರುವ ನಿಲುವುಗಳು ಎಂಥವು ಎಂಬುದನ್ನು ದಿ ಕಾಶ್ಮೀರ್ ಫೈಲ್ಸ್‌ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.


ಈ ವರೆಗೂ ಬಾಲಿವುಡ್‌ ಚಿತ್ರಗಳನ್ನು ಮಾತ್ರವೇ ನೋಡುತ್ತ, ಬಾಲಿವುಡ್ ಬಿಟ್ಟರೆ ದೇಶದಲ್ಲಿ ಬೇರೆ ಯಾವ ಚಿತ್ರರಂಗವೂ ಇಲ್ಲವೇ ಇಲ್ಲ ಎಂದು ಭಾವಿಸಿದ್ದ ಬಹುದೊಡ್ಡ ಒಂದು ಪ್ರೇಕ್ಷಕರ ವರ್ಗದ ತಲೆಯೊಳಗೆ ಎಂತಹ ಘೋರ ವಿಷವನ್ನು ಈ ಬಾಲಿವುಡ್ ಬ್ಲಾಕ್‌ಬಸ್ಟರ್ ಸಿನಿಮಾಗಳು (ಅಪವಾದವೆನ್ನುವಂತೆ ಕೆಲವೇ ಚಿತ್ರಗಳನ್ನು ಹೊರತುಪಡಿಸಿ) ತುಂಬಿವೆ ಎಂಬುದು ಈಗ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿವೆ.

ಅಗ್ನಹೋತ್ರಿ ಅವರು ಈಗಾಗಲೇ ಸರಣಿ ವೀಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದು, ಅವುಗಳಲ್ಲಿ ಒಂದು ಇಲ್ಲಿದೆ. ನೋಡಿ, 59 ನಿಮಿಷಗಳ ಅವಧಿಯ ಈ ವೀಡಿಯೋದಲ್ಲಿ ಅವರ ಮಾತುಗಳನ್ನು ಆಲಿಸಿ, ನೀವೇ ನಿರ್ಧರಿಸಿ.





hit counter

Post a Comment

0 Comments