ಪಣಜಿ: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಮಡಗಾಂವ ಗೋವಾದಲ್ಲಿ ಅಕ್ಷಯ ತೃತೀಯ ಅಂಗವಾಗಿ ಗಂಧಲೇಪನ ಸೇವೆ ನೆರವೇರಿಸಲಾಯಿತು.
ಅಷ್ಟೋತ್ತರ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ಸೇವೆ ನೆರವೇರಿಸಲಾಯಿತು. ಮಠದ ಅರ್ಚಕರಾದ ಕೋಬ್ರೇಶ್ ಆಚಾರ್ ರವರು ಶ್ರೀಗುರು ರಾಯರಿಗೆ ಗಂಧ ಲೇಪನ ಸೇವೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಠದ ಮ್ಯಾನೇಜರ್ ಪ್ರಕಾಶ ಸಾವಳಗಿ, ಮಠದ ವಿಚಾರಣಕರ್ತರಾದ ಪ್ರಭುರಾಜ ಅಪರಂಜಿ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.
ಮಧ್ಯಾಹ್ನ ಹಸ್ತೋದಕ, ನಂತರ ತೀರ್ಥಪ್ರಸಾದ ವಿತರಣೆ ನಡೆಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments