ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸೇವೆಗಳಿಗೆ ನಾವು ಬೇರೆ ಬೇರೆ ಇಂಟರ್ನೆಟ್ ಸೇವೆಯನ್ನು ಅವಲಂಬಿಸುತ್ತಿದ್ದೆವು. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಹೊಸದಾದ ವೆಬ್ಸೈಟ್ ನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ.
ನಾವು ಸರ್ಕಾರಿ ಸೇವೆಗಳನ್ನು ಪೂರೈಸಿಕೊಳ್ಳಲು ಅಗತ್ಯವಾಗಿ ಪಾಸ್ ವರ್ಡ್ ಹೊಂದಿರಬೇಕಿತ್ತು. ಆದರೆ ಇದೀಗ ಅಂತಹ ಸಮಸ್ಯೆ ಸೃಷ್ಠಿಯಾಗದಿರಲು ಒಂದೇ ವೆಬ್ಸೈಟ್ ನ್ನು ಪ್ರಾರಂಭಿಸುವ ವ್ಯವಸ್ಥೆ ಶೀಘ್ರವೇ ಶುರುವಾಗಲಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಯಾವ ರೀತಿಯ ಸೇವೆಗಳನ್ನು ಒಂದೇ ವೆಬ್ಸೈಟ್ ನಲ್ಲಿ ಪೂರೈಸಬೇಕೆಂಬ ವಿಷಯದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಮುಂದಿನ ವರ್ಷದ ಅಗಸ್ಟ್ ನಿಂದ ಬಹುನಿರೀಕ್ಷಿತ ವೆಬ್ಸೈಟ್ ಸೇವೆಗಳು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
0 Comments