ಹೊಸದಿಲ್ಲಿ: ಭಾರತೀಯ ಸೇನಾಪಡೆಗಳ ಸಂಯುಕ್ತ ಮಹಾದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸೇನಾ ಅಧಿಕಾರಿಗಳು ಇಂದು ಬೆಳಗ್ಗೆ ತಮಿಳುನಾಡಿನ ಊಟಿ ಸಮೀಪ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ ಘಟನೆ ಹಲವು ದೇಶದ್ರೋಹಿಗಳ ಪಾಲಿಗೆ ಹಾಸ್ಯಾಸ್ಪದವೆನಿಸಿದೆ.
ದೇಶದ ಪ್ರಮುಖ ಸುದ್ದಿವಾಹಿನಿ ಎನ್‌ಡಿಟಿವಿಯ ಫೇಸ್‌ಬುಕ್ ಪುಟದಲ್ಲಿ ಹಾಕಿರುವ ದುರಂತದ ಸುದ್ದಿಯ ಪೋಸ್ಟ್‌ಗೆ ಬಂದಿರುವ ನೂರಾರು ಪ್ರತಿಕ್ರಿಯೆಗಳು, ಹಹಹ ಎಂದು ನಗುವ ಇಮೋಜಿಗಳು ಈ ದುರುಳರ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೀಗ ವ್ಯಾಪಕ ಚರ್ಚೆ, ಖಂಡನೆಗಳು ನಡೆಯುತ್ತಿದ್ದು, ದೇಶದ್ರೋಹಿಗಳ ಕ್ಷುದ್ರ ಪ್ರತಿಕ್ರಿಯೆಗಳ ಸಂಕಲನದ ಸ್ಕ್ರೀನ್‌ಶಾಟ್‌ಗಳು ಧಾರಾಳವಾಗಿ ಹರಿದಾಡುತ್ತಿವೆ.
ರಾಷ್ಟ್ರದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಸೇರಿದಂತೆ 13 ಮಂದಿ ಸೇನಾ ಸಿಬ್ಬಂದಿ ದುರ್ಮರಣಕ್ಕೆ ಈಡಾದ ಘಟನೆ ಇಡೀ ದೇಶವನ್ನು ದುಃಖದ ಮಡುವಿಗೆ ತಳ್ಳಿದ್ದರೆ, ದೇಶದ್ರೋಗಳು ಸಂಭ್ರಮಿಸುತ್ತಿರುವುದು ಜನಸಾಮಾನ್ಯರ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ಬಾರಿ ಭಾರತ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುವ ಈ ದುರುಳರು ಪಾಕಿಸ್ತಾನದವರೋ, ಚೀನಾದವರೋ ಅಲ್ಲ; ಅಥವಾ ಅಲ್ಲಿ ಕುಳಿತು ಭಾರತದ ಬಗ್ಗೆ ವಿದ್ರೋಹ ನಡೆಸುವವರೂ ಅಲ್ಲ. ನಮ್ಮ ನಡುವೆಯೇ ಇದ್ದುಕೊಂಡು ಭಾರತದ ಶತ್ರುಗಳ ಮನಃಸ್ಥಿತಿಯನ್ನು ಹೊಂದಿದವರು.
ಜನರಲ್ ಬಿಪಿನ್ ರಾವತ್ ಅವರೇ ಒಮ್ಮೆ ಹೇಳಿದ್ದರು- ದೇಶವು 2.5 ಆಯಾಮಗಳಲ್ಲಿ ಯುದ್ಧ ನಡೆಸಬೇಕಾಗುತ್ತದೆ. ಎಂದು. ಅಂದರೆ ಭಾರತ ಏಕಕಾಲಕ್ಕೆ 2.5 ಶತ್ರುಗಳ ವಿರುದ್ಧ ಹೋರಾಡಬೇಕಾಗುತ್ತದೆ ಎಂಬ ಅರ್ಥ. ಬಿಡಿಸಿ ಹೇಳಬೇಕೆಂದರೆ ಪಾಕಿಸ್ತಾನ ಮತ್ತು ಚೀನಾ ಭಾರತದ ಶತ್ರುಗಳು ಎಂಬುದು ಎಲ್ಲರಿಗೂ ಬಹಿರಂಗ ವೇದ್ಯ. ಇನ್ನುಳಿದ ಅರ್ಧ ಯಾವುದು ಎಂದರೆ, ಈಗ ಜನರಲ್ ರಾವತ್ ಅವರು ಮೃತಪಟ್ಟಾಗ ಸಂಭ್ರಮಿಸುವ ಮನಃಸ್ಥಿತಿಯವರೇ ಆಗಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಈ ಕುರಿತು ಕೇಂದ್ರ ಸರಕಾರ ಶೀಘ್ರವೇ ತನಿಖೆ ನಡೆಸಿ ದುರುಳರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕಿದೆ.
0 Comments