ಜೊಹಾನ್ಸ್‌ಬರ್ಗ್: ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ನಡೆಯಬೇಕಾದ ಎಲ್ಲಾ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆದರೆ ದ.ಆಫ್ರಿಕದಲ್ಲಿ ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆಯ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ. ಆದ್ದರಿಂದ ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶಿಸಲು ಅನುಮತಿ ನೀಡಲು ನಿರಾಕರಿಸಿದೆ.
ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಿ ಆಫ್ರಿಕನ್ ಸರ್ಕಾರವು ಜನರಿಗೆ ಕ್ರೀಡಾಂಗಣಕ್ಕೆ ಬರಲು ಅವಕಾಶ ನೀಡಿತ್ತು.
ಸತತ ಮೂರು ದಿನಗಳ ಕಾಲ ಭಾರತ ತಂಡ ಮೊದಲ ಟೆಸ್ಟ್ ಗೆ ಸಿದ್ಧತೆ ನಡೆಸುತ್ತಿದೆ.
ಆದರೆ ಆಟಗಾರರ ಹಾಗೂ ಕ್ರೀಡಾಭಿಮಾನಿಗಳ ಸುರಕ್ಷತೆಯ ದೃಷ್ಠಿಯಿಂದ ಮಂಡಳಿ ಈ ಸಲ ಪ್ರೇಕ್ಷಕರಿಗೆ ಮೈದಾನದ ಒಳಗೆ ಪ್ರವೇಶವನ್ನು ನಿರ್ಬಂಧಿಸಿದೆ.
0 Comments