ಪಣಜಿ: ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕರಲ್ಲಿ ಡಾ. ಅಂಬೇಡ್ಕರ್ ರವರು ಕೂಡ ಒಬ್ಬರು. ಇವರು ತಮ್ಮ ಜೀವನದುದ್ದಕ್ಕೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ಎಂದು ಸಚಿವ ಮಾವಿನ್ ಗುದಿನ್ಹೊ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ರವರ 131ನೇ ಜಯಂತಿಯ ಅಂಗವಾಗಿ ವಾಸ್ಕೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋವಾ (ಪ್ರವೀಣ ಕುಮಾರ್ ಶೆಟ್ಟಿ ಬಣ) ವತಿಯಿಂದ ವಾಸ್ಕೊದ ಚಿಕಲಿಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಡಾ. ಅಂಬೇಡ್ಕರ್ ರವರ ಜೀವನದ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಈ ಸಂದರ್ಭದಲ್ಲಿ ಸಚಿವ ಮಾವಿನ್ ಗುದಿನ್ಹೊ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕಾರ್, ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಮಾಂತೇಶ್ ಕಾರಗೇರಿ, ಕಾರ್ಯದರ್ಶಿ ಶಿವಾನಂದ ಮಸೀಬನಲ್, ಖಜಾಂಚಿ ಮಲ್ಲಯ್ಯಸ್ವಾಮಿ, ತಾಲೂಕಾಧ್ಯಕ್ಷ ದಿಲೀಪ ಭಜಂತ್ರಿ, ನ್ಯೂವಾಡೆಮ್ ಅಧ್ಯಕ್ಷ ಚಂದ್ರಶೇಖರ್ ವಾಲ್ಮೀಕಿ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments