ಹೊಸದಿಲ್ಲಿ: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸ್ಮರಣಾರ್ಥ ದೆಹಲಿಯ ಲುಟಿಯನ್ಸ್ ರೆಸ್ಟೋರೆಂಟ್ 10 ದಿನಗಳವರೆಗೆ 56 ಇಂಚಿನ ಥಾಲಿಯನ್ನು ನೀಡಲಿದೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ. ಯೋಜನೆಯ ಭಾಗವಾಗಿ ಇಬ್ಬರು ಅದೃಷ್ಟ ವಿಜೇತರು ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತಾರೆ.
ಕನ್ನಾಟ್ ಪ್ಲೇಸ್‌ನಲ್ಲಿರುವ ಆರ್ಡರ್ 2.1 ರೆಸ್ಟೊರೆಂಟ್ ತನ್ನ ಥಾಲಿಗಳಿಗೆ ಹೆಸರುವಾಸಿಯಾಗಿದೆ ಎಂದು ಅದರ ಮಾಲೀಕ ಸುವೀತ್ ಕಲ್ರಾ ಹೇಳಿದ್ದಾರೆ.
"ನಾವು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇವೆ. ನಮ್ಮ ರೆಸ್ಟೊರೆಂಟ್ ವಿಶೇಷ ಥಾಲಿಗಳಿಗೆ ಹೆಸರುವಾಸಿಯಾಗಿದೆ. 56 ಇಂಚಿನ ಥಾಲಿಯು 56 ಭಕ್ಷ್ಯಗಳ ಸಂಯೋಜನೆಯಾಗಿದ್ದು, ಒಂದೇ ಥಾಲಿಯಾಗಿ ಜನರಿಗೆ ಬಡಿಸಲಾಗುತ್ತಿದೆ. ಇದು ಅವರ ಜನ್ಮದಿನದ ಸ್ಮರಣಾರ್ಥ ಮತ್ತು ದೇಶ ಹಾಗೂ ನಾಗರಿಕರಿಗಾಗಿ ಅವರು ಮಾಡಿದ ಸೇವೆ ಮತ್ತು ಸಾಧನೆಗಳನ್ನು ಗೌರವಿಸಲು ನಾವು ಈ ಥಾಲಿಯನ್ನು ಸಮರ್ಪಿಸುತ್ತಿದ್ದೇವೆ" ಎಂದು ಕಲ್ರಾ ತಿಳಿಸಿದರು.
ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 26 ರ ನಡುವೆ ಈ ಥಾಲಿ ಉಣ್ಣುವವರಲ್ಲಿ ಇಬ್ಬರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವರು ಮೋದಿಯವರ ನೆಚ್ಚಿನ ಸ್ಥಳವಾದ ಕೇದಾರನಾಥಕ್ಕೆ ಉಚಿತ ಪ್ರವಾಸಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತಾರೆ ಎಂದು ಕಲ್ರಾ ಹೇಳಿದರು,
"ಕೇದಾರನಾಥ ದೇಗುಲಕ್ಕೆ ಅವರ ಭೇಟಿಯನ್ನು ಏರ್ಪಡಿಸುವ ಮೂಲಕ ಥಾಲಿಯು ಇಡೀ ಕುಟುಂಬಕ್ಕೆ ಸಂತೋಷವನ್ನು ನೀಡುತ್ತದೆ. ಇದು ವೈಯಕ್ತಿಕವಾಗಿ ಮೋದಿಜಿಯನ್ನು ನಿಜವಾಗಿಯೂ ಸಂತೋಷಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಥಾಲಿಯು 20 ವಿಧದ ಸಬ್ಜಿಗಳು, ವಿವಿಧ ರೀತಿಯ ಬ್ರೆಡ್‌ಗಳು, ದಾಲ್ ಮತ್ತು ಗುಲಾಬ್ ಜಾಮೂನ್‌ಗಳನ್ನು ಹೊಂದಿರುತ್ತದೆ, ಜೊತೆಗೆ ಕುಲ್ಫಿಯ ಆಯ್ಕೆಯೂ ಇರುತ್ತದೆ.
"ಥಾಲಿಯು ಉತ್ತರ ಭಾರತದ 56 ಭಕ್ಷ್ಯಗಳನ್ನು ಹೊಂದಿದೆ. ಸಸ್ಯಾಹಾರಿ ಊಟದ ಥಾಲಿಯು ₹ 2,600 ಮತ್ತು ತೆರಿಗೆಗಳು ಹಾಗೂ ನಾನ್ ವೆಜ್ ಥಾಲಿಯು ₹ 2,900 ಮತ್ತು ತೆರಿಗೆಗಳು ಸಹಿತ ದರದಲ್ಲಿ ಲಭ್ಯವಿದೆ. ಭೋಜನ ಥಾಲಿಗಳ ಬೆಲೆ ಪ್ರತಿ ಥಾಲಿಗೆ ₹ 300 ಹೆಚ್ಚುವರಿಯಾಗಿದೆ," ಎಂದು ಅವರು ತಿಳಿಸಿದರು.
ಒಟ್ಟಿಗೆ ಬಂದ ಇಬ್ಬರು ವ್ಯಕ್ತಿಗಳಲ್ಲಿ ಯಾರಾದರೂ 40 ನಿಮಿಷಗಳಲ್ಲಿ ಥಾಲಿಯನ್ನು ಮುಗಿಸಿದರೆ ಅವರಿಗೆ ₹ 8.5 ಲಕ್ಷ ಬಹುಮಾನ ನೀಡಲಾಗುವುದು ಎಂದು ಕಲ್ರಾ ಹೇಳಿದರು. ರೆಸ್ಟಾರೆಂಟ್ ಶೀಘ್ರದಲ್ಲೇ 'ಹಣದುಬ್ಬರ/ರಿಸೆಷನ್ ಥಾಲಿ' ಅನ್ನು ಪ್ರಾರಂಭಿಸಲು ಯೋಜಿಸಿದೆ.
"ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಣದುಬ್ಬರ ಹೆಚ್ಚಾಗಿದೆ ಮತ್ತು ಅದನ್ನು ಕಡಿಮೆ ಮಾಡಲು ಪ್ರಧಾನಿ ಮೋದಿಗೆ ನಮ್ಮ ಮನವಿಯಾಗಿದೆ. 10 ದಿನಗಳ ಅವಧಿಯಲ್ಲಿ ಥಾಲಿಯನ್ನು ಬಿಡುಗಡೆ ಮಾಡಲಾಗುವುದು. ನಾವು ಅದನ್ನು ಈಗ ಸಿದ್ಧಪಡಿಸುವ ಹಂತದಲ್ಲಿದ್ದೇವೆ" ಅವರು ಹೇಳಿದರು.
ರೆಸ್ಟೋರೆಂಟ್‌ನಲ್ಲಿ 'ಪುಷ್ಪ ಥಾಲಿ' ಮತ್ತು 'ಬಾಹುಬಲಿ ಥಾಲಿ'ಗಳನ್ನು ಸಹ ನೀಡಲಾಗುತ್ತದೆ ಎಂದು ಎನ್‌ಡಿಟಿವಿ ಡಿಜಿಟಲ್ ಮಾಧ್ಯಮ ವರದಿ ಮಾಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
0 Comments