ಪಣಜಿ: ಅಖಿಲ ಗೋವಾ ಕ್ಯಾಥೊಲಿಕ್ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಶನ್ಸ್ ವತಿಯಿಂದ ಓಲ್ಡ್ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ಅಂಕೋಲಾ ಮೂಲದ ಹಿರಿಯ ಉಪನ್ಯಾಸಕರಾದ ಪೂರ್ಣಿಮಾ ರಮೇಶ್ ನಾಯಕ್ (ಗಾಂವಕರ್) ರವರನ್ನು ಆರ್ಚಬಿಷಪ್ ಫಿಲಿಪ್ ನೇರಿ ಫೆರಾರೊ ಅವರು ಸನ್ಮಾನಿಸಿದರು.
ಕಳೆದ ಸುಮಾರು 32 ವರ್ಷಗಳಿಂದ ಪೂರ್ಣಿಮಾ ನಾಯಕ್ ರವರು ಗೋವಾದ ಸೆಂಟ್ ಫ್ರಾನ್ಸಿಸ್ ಜೇವಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದು, ಸಾಮಾಜಿಕ ಕಾರ್ಯದಲ್ಲಿಯೂ ಅವರು ತೊಡಗಿಕೊಂಡಿದ್ದಾರೆ. ಈ ಹಿಂದೆ ಮಾಪ್ಸಾ ಕನ್ನಡ ಸಂಘದಲ್ಲಿ ಉಪಾಧ್ಯಕ್ಷರಾಗಿಯೂ ಗೋವಾದಲ್ಲಿ ಕನ್ನಡದ ಸೇವೆ ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments